ನವದೆಹಲಿ (ಫೆ.06): ಶಾರೂಕ್ ಖಾನ್ ಅಭಿನಯದ 'ರಯೀಸ್' ಚಿತ್ರದಲ್ಲಿ ಆಕ್ಷೇಪಾರ್ಹ ಸಂಗತಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೆನ್ಸಾರ್ ಮಂಡಳಿ ಪಾಕ್ ನಲ್ಲಿ ಚಿತ್ರ ಬಿಡುಗಡೆ ಅವಕಾಶ ನೀಡಿಲ್ಲ.

ರಯೀಸ್ ಚಿತ್ರದಲ್ಲಿ ಮುಸಲ್ಮಾನರನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ. ಮುಸಲ್ಮಾನರೆಲ್ಲ ಕ್ರಿಮಿನಲ್ ಗಳು, ಭಯೋತ್ಪಾದಕರು ಎಂಬಂತೆ ಬಿಂಬಿಸಲಾಗಿದೆ ಎನ್ನಲಾಗಿದ್ದು ಪಾಕಿಸ್ತಾನ ಸೆನ್ಸಾರ್ ಮಂಡಳಿ ಬಿಡುಗಡೆಗೆ ಅವಕಾಶ ನೀಡಿಲ್ಲ.

ರಯೀಸ್ ಚಿತ್ರ ಪ್ರದರ್ಶನಕ್ಕೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದ ಬಳಿಕ ಚಿತ್ರ ವಿತರಕರು ಕ್ಲಿಯರೆನ್ಸ್ ಗಾಗಿ ಸೆನ್ಸಾರ್ ಮಂಡಳಿಗೆ ಸಲ್ಲಿಸಿದ್ದರು. ರಯೀಸ್ ಚಿತ್ರವನ್ನು ಪಾಕ್ ಸೆನ್ಸಾರ್ ಮಂಡಳಿ ನಿಷೇಧಿಸುವುದಕ್ಕೆ ಕಾರಣ ಹೇಳಲು ಅಧಿಕಾರಿಗಳು ನಿರಾಕರಿಸಿದ್ದಾರೆ.