ವಾಷಿಂಗ್ಟನ್(ಅ.15): ಚುನಾವಣಾ ಪ್ರಚಾರದ ಉದ್ದಕ್ಕೂ ವಿವಾದಗಳನ್ನು ಸೃಷ್ಟಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಈಗ ಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿದ್ದಾರೆ.

ಡೊನಾಲ್ಡ್ ಟ್ರಂಪ್ ಲೈಂಗಿಕ ಆಕ್ರಮಣ ಮತ್ತು ಕಿರುಕುಳ ನೀಡಿದ್ದರು ಎಂದು ಐವರು ಮಹಿಳೆಯರು ಮಾಡಿರುವ ಆರೋಪವು ಟ್ರಂಪ್ ಪ್ರಚಾರದ ಮೇಲೆ ಬಿರುಗಾಳಿ ಎಬ್ಬಿಸಿದೆ. ದಿನೇ ದಿನೇ ದುರ್ಬಲವಾಗುತ್ತಿರುವ ಅವರ ಪ್ರಚಾರಕ್ಕೆ ಇದು ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ಟ್ರಂಪ್ ಬಹಳ ಹಿಂದೆ ಲೈಂಗಿಕ ತೃಷೆಗಾಗಿ ಇಬ್ಬರು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಆರೋಪವಿದೆ.