ಕೈ ಸೋಶಿಯಲ್ ಮಿಡಿಯಾದಲ್ಲಿ ಲೈಂಗಿಕ ಕಿರುಕುಳ?: ಸುಮ್ನಿದ್ರಾ ರಮ್ಯಾ!

Sexual harassment allegation hits Congress, FIR against party’s social media cell member
Highlights

ಕೈ ನಾಯಕರ ಮೇಲೆ ಲೈಂಗಿಕ ಕಿರುಕುಳ ಆರೋಪ

ಸೋಶಿಯಲ್ ಮಿಡಿಯಾ ಸೆಲ್ ನಲ್ಲಿ ಏನು ನಡೀತಿದೆ?

ನಾಯಕರ ವಿರುದ್ದ ಕಿರುಕುಳ ಆರೋಪ ಮಾಡಿದ ಮಹಿಳೆ

ಮಹಿಳೆ ದೂರಿನನ್ವಯ ಎಫ್‌ಐಆರ್ ದಾಖಲು

ಮಹಿಳೆ ದೂರಿಗೆ ದಿವ್ಯ ಸ್ಪಂದನ ಪ್ರತಿಕ್ರಿಯೆ ಏನು?

ನವದೆಹಲಿ(ಜು.3): ಕಾಂಗ್ರೆಸ್ ನ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಈ ಹಿಂದೆ ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ಕೆಲಸ ಮಾಡಿದ್ದ ಮಹಿಳೆಯೋರ್ವರು ದೂರು ನೀಡಿದ್ದು, ಸೋಶಿಯಲ್ ಮಿಡಿಯಾಸೆಲ್‌ನಲ್ಲಿ ಕೆಲಸ ಮಾಡುವ ಪಕ್ಷದ ಹಿರಿಯ ನಾಯಕರ ವಿರುದ್ದ ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳೆ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಸದ್ಯ ಕಾಂಗ್ರೆಸ್ ಮಿಡಿಯಾ ಸೆಲ್‌ನಲ್ಲಿ ಕೆಲಸ ಮಾಡುತ್ತಿರುವ ಪಕ್ಷದ ಸದಸ್ಯರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕೆಲಸದ ವೇಳೆ ಹಿಂದಿನಿಂದ ಬಂದು ತಮ್ಮನ್ನು ಮುಟ್ಟುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದನ್ನೇ ಆ ನಾಯಕ ತನ್ನ ಕಾಯಕ ಮಾಡಿಕೊಂಡಿದ್ದ ಎಂದು ಸಂತ್ರಸ್ತ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಪತ್ರ ಬರೆದಿರುವ ಮಹಿಳೆ, ಪಕ್ಷದ ಸೋಶಿಯಲ್ ಮಿಡಿಯಾ ಸೆಲ್‌ನಲ್ಲಿ ನಡೆಯುತ್ತಿರುವ ಇಂತಹ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಕುರಿತು ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್‌ನ ಮುಖ್ಯಸ್ಥೆ ದಿವ್ಯ ಸ್ಪಂದನ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಇದೇ ವೇಳೆ ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋಶಿಯಲ್ ಮಿಡಿಯಾ ಸೆಲ್ ನ ಮುಖ್ಯಸ್ಥೆ ದಿವ್ಯ ಸ್ಪಂದನ ಪ್ರತಿಕ್ರಿಯೆ ನೀಡಿದ್ದು, ಮಹಿಳೆ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು ಆಂತರಿಕ ತನಿಖೆ ಮುಂದುವರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮಹಿಳೆಯ ದೂರಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಮಾತೆತ್ತಿದರೆ ಮಹಿಳಾ ಸುರಕ್ಷತೆ ಎಂದು ಬೊಬ್ಬೆ ಇಡುವ ಕಾಂಗ್ರೆಸ್ ಈಗೇನು ಮಾಡಲಿದೆ ಎಂದು ಪ್ರಶ್ನಿಸಿದೆ.

loader