ಯುವತಿಯರೇ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ. ಮೈ ಮೇಲೆ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿದ್ದಾರೆ. ಲಿಫ್ಟ್ ‌ನಲ್ಲಿ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಫ್ಲಾಸ್ಟಿಕ್‌ ಹಲ್ಲಿ ಎಸೆದು ಭಯ ಹುಟ್ಟಿಸಿ ಹಲ್ಲಿ ತೆಗೆಯುವ ನೆಪದಲ್ಲಿ ಆಕೆ ಅಂಗಾಂಗ ಮುಟ್ಟಿಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತ ಯುವತಿ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು(ಜೂ.17): ಯುವತಿಯರೇ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ. ಮೈ ಮೇಲೆ ಹಲ್ಲಿ ಎಸೆದು ಲೈಂಗಿಕ ದೌರ್ಜನ್ಯ ಎಸಗುವ ಕಿಡಿಗೇಡಿಗಳಿದ್ದಾರೆ.
ಈ ಸಂಬಂಧ ಇಂದಿರಾನಗರ ಠಾಣೆಗೆ ಯುವತಿ ದೂರು ಕೊಟ್ಟಿದ್ದು, ಐಪಿಸಿ ಸೆಕ್ಷನ್ 354ರ(ಲೈಂಗಿಕ ದೌರ್ಜನ್ಯ) ಅಡಿ ದೂರು ದಾಖಲಿಸಲಾಗಿದೆ. ಕಂಪನಿ ಕಟ್ಟಡದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿ ವಶಕ್ಕೆ ಪಡೆದು ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
