ನವದೆಹಲಿ[ಆ. 28]  ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ತನ್ನ ಹೊಸ ಶಿಕ್ಷಣ ನೀತಿಯಲ್ಲಿ ಲೈಂಗಿಕ ಶಿಕ್ಷಣವನ್ನು ಪಠ್ಯದ ಒಂದು ಭಾಗವಾಗಿ ತರುವ ಪ್ರಸ್ತಾವನೆ ಇಟ್ಟಿದ್ದು ಅದರ ಅಗತ್ಯವೂ ಇಲ್ಲ. ಈ ರೀತಿಯ ಕ್ರಮ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ.

ಶಿಕ್ಷಣ ತಜ್ಞ ದಿನಾನಾಥ್ ಬಾತ್ರಾ ಅವರು ಸ್ಥಾಪಿಸಿರುವ  ಆರ್ ಎಸ್ ಎಸ್ ನೇತೃತ್ವದ ಶಿಕ್ಷಾ ಸಂಸ್ಕೃತಿ ಉತ್ಥಾನ ನಯಾಸ್[ಎಸ್ ಎಸ್ ಯು ಎನ್] ಈ ವಿಚಾರದಲ್ಲಿ ಮಕ್ಕಳು ಮತ್ತು ಪಾಲಕರಿಗೆ ಒಂದು ಹಂತದ ಕೌನ್ಸೆಲಿಂಗ್ ಅಗತ್ಯ ಇದೆ ಎಂದು ಹೇಳಿದೆ.

ಮಂಗಳೂರು ವಿವಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸೆಕ್ಸ್ ಪಾಠ!

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮಂತ್ರಿ  ರಮೇಶ್ ಪೊಕ್ರಿಯಾಲ್ ಈ ವರ್ಷದ ಮೇ ನಲ್ಲಿ ಸಲ್ಲಿಕೆ ಮಾಡಿದ್ದರು. ಪ್ರೌಢಶಾಲೆ ಹಂತದಲ್ಲಿ ಲೈಂಗಿಕ ಶಿಕ್ಷಣ ಅಗತ್ಯ ಎಂಬುದನ್ನು ಹೇಳಲಾಗಿತ್ತು. ದೌರ್ಜನ್ಯ, ಮಹಿಳೆಯರನ್ನು ಗೌರವದಿಂದ ಕಾಣುವುದು, ಸುರಕ್ಷತೆ, ಕುಟುಂಬ ಯೋಜನೆ, ಎಸ್ ಟಿಡಿ ವಿಚಾರಗಳ  ಬಗ್ಗೆ ತಿಳಿವಳಿಕೆ ಬೇಕು ಎಂಬ ಸಲಹೆ ನೀಡಲಾಗಿತ್ತು.

ಹಿಂದಿನ ಬಿಜೆಪಿ ಸರ್ಕಾರ ನೇಮಕ ಮಾಡಿದ್ದ  ಆರ್ ಕೆ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ವರದಿ ಸಲ್ಲಿಸಿ ಅನೇಕ ಶಿಫಾರಸುಗಳನ್ನು ಮಾಡಿತ್ತು.  ಆದರೆ ‘ಸೆಕ್ಸ್’ ಎನ್ನುವ ಪದ ಬಳಕೆಯನ್ನು ಯಾವ ಕಾರಣಕ್ಕೂ ಪಠ್ಯಕ್ಕೆ ಸೇರಿಸಬಾರದು ಎಂದು ಎಸ್ ಎಸ್ ಯು ಎನ್ ಕಾರ್ಯದರ್ಶಿ ಅತುಲ್ ಕೋಠಾರಿ ಹೇಳಿದ್ದಾರೆ.

ಇಂಥ ವಿಚಾರಗಳ ಜವಾಬ್ದಾರಿಯನ್ನು ಪಾಲಕರೇ ವಹಿಸಿಕೊಳ್ಳಬೇಕು. ಅಗತ್ಯವಾದರೆ ವಿದ್ಯಾರ್ಥಿಗಳನ್ನು ಗುರುತಿಸಿ ಕೌನ್ಸೆಲಿಂಗ್ ಮಾಡಿದರೆ ಸಾಕು ಎಂದು ಆರ್ ಎಸ್ ಎಸ್ ನೇತೃತ್ವದ ಶಿಕ್ಷಣ ಸಂಸ್ಥೆ ಹೇಳಿದೆ.