ಈ ರದ್ದತಿ ಆದೇಶದಿಂದ ಸಂತೋಷವಾಗಿದೆ. ಗಲ್ಲಿಗಲ್ಲಿಗೊಂದು ಇಂಥ ವಾಣಿಜ್ಯ ಮಂಡಳಿಗಳು ಹುಟ್ಟಿಕೊಂಡರೆ ಒಂದು ಸಂಸ್ಥೆಗೆ ಯಾವ ಗೌರವ ಉಳಿಯಲು ಸಾಧ್ಯ? ಹಾಗಾಗಿ ನಾನು ಮೇಲ್ಮನವಿ ಸಲ್ಲಿಸಿದ್ದೆ. ವಾಣಿಜ್ಯ ಸಂಸ್ಥೆ ವಿಚಾರವಾಗಿ ಗೊಂದಲ ಹುಟ್ಟಿಸುವ ಕೆಲಸ ನಡೆಯುತ್ತಿದೆ. ಇದೀಗ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.ಸಾ.ರಾ. ಗೋವಿಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಇಂತಹ ಆದೇಶ ಹೊರಡಿಸುವ ಅಧಿಕಾರಿಯ ವಿರುದ್ಧ ನಾನು ಪ್ರತಿಭಟನೆ ಮಾಡುವವನಿದ್ದೇನೆ. ಅಷ್ಟೇ ಅಲ್ಲ, ಈ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಲು ಹತ್ತಲು ತೀರ್ಮಾನಿಸಿದ್ದೇನೆ. ಕರ್ನಾಟಕದಲ್ಲಿ ಕನ್ನಡದ ಹೆಸರಿಟ್ಟಕೊಳ್ಳಬಾರದು ಎಂದು ಆದೇಶ ಹೊರಡಿಸುವುದು ಅವಿವೇಕತನ. ಅವರ ಕಚೇರಿಯ ಎದುರು ಧರಣಿ ಕೂರುವುದಕ್ಕೆ ನಾನು ನಿರ್ಧರಿಸಿದ್ದೇನೆ. ಸೋಮವಾರದಿಂದ ಕಾನೂನು ಪ್ರಕ್ರಿಯೆ ಶುರುವಾಗಲಿದೆ.ಕೃಷ್ಣೇಗೌಡ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ
ಬೆಂಗಳೂರು (ಏ.09): ಕರ್ನಾಟಕ ಡಬ್ಬಿಂಗ್ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಹೆಸರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬುದಾಗಿ ತಿದ್ದುಪಡಿ ಮಾಡಿದ ಆದೇಶವನ್ನು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಹಿಂಪಡೆದುಕೊಂ ಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎಂಬ ಹೆಸರಿಗೂ ಈಗಾಗಲೇ ಅಸ್ತಿತ್ವ ದಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೆಸರಿಗೂ ತುಂಬಾ ಹೋಲಿಕೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
