ಅ.01 ರಂದು ಮೊಹರಂ ಬಂದಿರುವ ಪ್ರಯುಕ್ತ ಸೆ. 30 ರ ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿಯನ್ನು ಮುಳುಗಿಸುವಂತಿಲ್ಲ ಎಂದು ನಿರ್ಬಂಧ ಹೇರಿ ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸೆ. 30 ರ ರಾತ್ರಿ 12 ಗಂಟೆವರೆಗೆ ದುರ್ಗಾಮೂರ್ತಿ ವಿಸರ್ಜನೆಗೆ ಕಲ್ಕತ್ತಾ ನ್ಯಾಯಾಲಯ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಯಾವುದೇ ಗಲಭೆ ಆಗದಂತೆ ಎಚ್ಚರ ವಹಿಸಿ. ಮಾರ್ಗವನ್ನು ನಿಗದಿಪಡಿಸಿ ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಕಲ್ಕತ್ತಾ (ಸೆ.21): ಅ.01 ರಂದು ಮೊಹರಂ ಬಂದಿರುವ ಪ್ರಯುಕ್ತ ಸೆ. 30 ರ ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿಯನ್ನು ಮುಳುಗಿಸುವಂತಿಲ್ಲ ಎಂದು ನಿರ್ಬಂಧ ಹೇರಿ ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸೆ. 30 ರ ರಾತ್ರಿ 12 ಗಂಟೆವರೆಗೆ ದುರ್ಗಾಮೂರ್ತಿ ವಿಸರ್ಜನೆಗೆ ಕಲ್ಕತ್ತಾ ನ್ಯಾಯಾಲಯ ಅವಕಾಶ ನೀಡಿದೆ. ಈ ಸಂದರ್ಭದಲ್ಲಿ ಯಾವುದೇ ಗಲಭೆ ಆಗದಂತೆ ಎಚ್ಚರ ವಹಿಸಿ. ಮಾರ್ಗವನ್ನು ನಿಗದಿಪಡಿಸಿ ಎಂದು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.
ಕಾನೂನು ಸುವ್ಯವಸ್ಥೆ ನೆಪದಲ್ಲಿ ಜನರ ಧಾರ್ಮಿಕ ನಂಬಿಕೆಗಳಿಗೆ ತಡೆಯೊಡ್ಡುವುದು ಸರಿಯಲ್ಲ. ಹಿಂದೂ-ಮುಸಲ್ಮಾನರು ಸಾಮರಸ್ಯದಿಂದ ಬದುಕಲು ಬಿಡಿ. ಅವರಿಬ್ಬರ ನಡುವೆ ಅಂತರವನ್ನು ಸೃಷ್ಟಿ ಮಾಡಬೇಡಿ. ನಿಮ್ಮ ನಿರ್ಧಾರಕ್ಕೆ ಸಮಂಜಸವಾದ ಕಾರಣವನ್ನು ಕೊಡಿ ಎಂದು ಕೋರ್ಟ್ ಮಮತಾ ಸರ್ಕಾರದ ಬಗ್ಗೆ ಗರಂ ಆಗಿದೆ.
ದುರ್ಗಾ ಮೂರ್ತಿ ವಿಸರ್ಜನೆ ಹಾಗೂ ಮೊಹರಂ ಮೆರವಣಿಗೆಗೆ ಬೇರೆ ಬೇರೆ ಮಾರ್ಗಗಳನ್ನು ನಿಗದಿಪಡಿಸಿ. ಎರಡೂ ಮೆರವಣಿಗೆಗಳು ಎದುರುಬದರಾಗದಂತೆ ನೋಡಿಕೊಳ್ಳಿ ಎಂದು ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ.
ಅ.01 ರಂದು ಮೊಹರಂ ಹಿನ್ನಲೆಯಲ್ಲಿ ಸೆ.30 ರಂದು ರಾತ್ರಿ 10 ಗಂಟೆ ನಂತರ ದುರ್ಗಾ ಮೂರ್ತಿ ವಿಸರ್ಜನೆಗೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ, ಸಂಘ-ಪರಿವಾರ ಹೈಕೋರ್ಟ್ ಮೆಟ್ಟಿಲೇರಿದ್ದವು.
