Asianet Suvarna News Asianet Suvarna News

ಖೋಟಾನೋಟ ಚಲಾವಣೆ ಮಾಡುತ್ತಿದ್ದ ಧಾರಾವಾಹಿ ನಟಿ ಬಂಧನ!

ಎರಡು ಸಾವಿರ ರು. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಧಾರಾವಾಹಿ ನಟಿ ಮತ್ತು ಆಟೋ ಚಾಲಕನನ್ನು ಅಂಗಡಿಯ ಮಾಲೀಕರು ಬೆನ್ನಟ್ಟಿಹಿಡಿದು ದಾಬಸ್‌ಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

Serial Actress Arrested For Involving In Fake Note Issue
  • Facebook
  • Twitter
  • Whatsapp

ಬೆಂಗಳೂರು(ಜೂ.09): ಎರಡು ಸಾವಿರ ರು. ಮುಖಬೆಲೆಯ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಧಾರಾವಾಹಿ ನಟಿ ಮತ್ತು ಆಟೋ ಚಾಲಕನನ್ನು ಅಂಗಡಿಯ ಮಾಲೀಕರು ಬೆನ್ನಟ್ಟಿಹಿಡಿದು ದಾಬಸ್‌ಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಆಂಧ್ರದ ಅನಂತಪುರ ಮೂಲದ, ಹಾಲಿ ಬೆಂಗಳೂರು ನಗರದ ನಂದಿನಿ ಲೇಔಟ್‌ ನಿವಾಸಿ, ಧಾರಾವಾಹಿ ನಟಿ ಜಯಮ್ಮ (50), ಆಟೋ ಚಾಲಕ ಗೋವಿಂದ ರಾಜು ಬಂಧಿತ ಆರೋಪಿಗಳು. ಇವರಿಂದ .2 ಸಾವಿರ ಮುಖಬೆಲೆಯ 20ಕ್ಕೂ ಹೆಚ್ಚು ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಇವರು ಆಟೋದಲ್ಲಿ ಬೆಂಗಳೂರಿನ ಹೊರಭಾಗದಲ್ಲಿ ಸಂಚರಿಸಿ, ಹೆದ್ದಾರಿ ಬದಿಯಲ್ಲಿರುವ ಅಂಗಡಿಗಳಿಂದ ತಿಂಡಿ, ತಿನಿಸು, ಸಣ್ಣಪುಟ್ಟವಸ್ತುಗಳನ್ನು ಖರೀದಿಸುತ್ತಿದ್ದರು. ಅಂಗಡಿ ಮಾಲೀಕರಿಗೆ .2 ಸಾವಿರ ಖೋಟಾ ನೋಟನ್ನು ನೀಡಿ ಚಿಲ್ಲರೆ ಪಡೆದು ಪರಾರಿಯಾಗುತ್ತಿದ್ದರು. ಇವರಿಂದ ಮೋಸಹೋದ ವ್ಯಾಪಾರಸ್ಥರು ಗುರುವಾರ ಅವರನ್ನು ಆಟೋದಲ್ಲಿ ನೋಡುತ್ತಿದ್ದಂತೆ ಬೆನ್ನಟ್ಟಿಹಿಡಿದು ದಾಬಸ್‌ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವರದಿ: ಕನ್ನಡಪ್ರಭ

Follow Us:
Download App:
  • android
  • ios