Asianet Suvarna News Asianet Suvarna News

ಪ್ರತ್ಯೇಕ ಲಿಂಗಾಯತ ಧರ್ಮ: ಸಿಎಂರನ್ನು ಅಭಿನಂದಿಸಿದ ಎಂ.ಬಿ.ಪಾಟೀಲ್

ವಿರೋಧಗಳ ನಡುವೆಯೇ ನ್ಯಾ.ನಾಗಮೋಹನ್ದಾಸ್ ಶಿಫಾರಸು ಅಂಗೀಕರಿಸಲು ಸಮ್ಮತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಎಂ.ಬಿ.ಪಾಟೀಲ್ ಅಭಿನಂದಿಸಿದ್ದಾರೆ.

Separate Lingayata religion m b patil congratulates CM Siddaramaiah

ಬೆಂಗಳೂರು: ವಿರೋಧಗಳ ನಡುವೆಯೇ ನ್ಯಾ.ನಾಗಮೋಹನ್ದಾಸ್ ಶಿಫಾರಸು ಅಂಗೀಕರಿಸಲು ಸಮ್ಮತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಎಂ.ಬಿ.ಪಾಟೀಲ್ ಅಭಿನಂದಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ  ಸಿದ್ದರಾಮಯ್ಯಗೆ ಇವತ್ತು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ಸಮಿತಿ ನೀಡಿದ್ದ ವರದಿ ಬಗ್ಗೆ ಚರ್ಚೆ ಆಗಿದೆ.
ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಪಾರಸು ಮಾಡಲು ಸಂಪುಟದಲ್ಲಿ ನಿರ್ಣಯಿಸಲಾಗಿದೆ, ಎಂದು ಅವರು ಹೇಳಿದ್ದಾರೆ.

'ವೀರಶೈವ ಲಿಂಗಾಯಿತ ಎರಡನ್ನೂ ಸೇರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವುದಕ್ಕೆ ಸಮ್ಮತಿಸಿದ್ದೇವೆ. ಅದಕ್ಕೂ ಮೊದಲು ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾಪನೆಯ ಸಾಧಕ ಬಾಧಕಗಳನ್ನು ಅಲ್ಪಸಂಖ್ಯಾತರ ಆಯೋಗದ ಮೂಲಕವೇ ಮತ್ತೊಮ್ಮೆ ಮರು ಪರಿಶೀಲನೆಗೆ ಕಳಿಸುವಂತೆ ಮನವಿ ಸಲ್ಲಿಸಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,ಟ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ಕಾನೂನು ತೊಡಕಿದೆ:

ಲಿಂಗಾಯತ ಸ್ವತಂತ್ರ ಧರ್ಮ ಘೋಷಣೆಗೆ ವಿಚಾರವಾಗಿ ಎರಡು ಕಾನೂನು ತೊಡಕುಗಳೂ ಇವೆ. ವೀರಶೈವ ಲಿಂಗಾಯತ ಎಂದು ಈಗಾಗಲೇ ಜಾತಿ ಪ್ರಮಾಣ ಪತ್ರ ವಿತರಿಸಿಯಾಗಿದೆ. ತಾಲೂಕು ಕಚೇರಿಗಳಿಂದ ಸಮುದಾಯದ ಎಲ್ಲ ನಾಗರಿಕರಿಗೆ ಪ್ರಮಾಣ ಪತ್ರ ವಿತರಣೆಯಾಗಿದೆ. ಈಗ ಹೊಸದಾಗಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಿದಲ್ಲಿ, ಇದನ್ನು ಸರಿಪಡಿಸುವುದು ಕಷ್ಟದ ಕೆಲಸ. ಇದರಿಂದ ಸಮುದಾಯದಲ್ಲಿ ಅಸಮಾಧಾನ ಶುರುವಾಗಲಿದೆ. 

ಜತೆಗೆ ಬಸವಣ್ಣನವರನ್ನ ಲಿಂಗಾಯತ ಸ್ವತಂತ್ರ ಧರ್ಮ ಗುರು ಎಂದು‌ ವಾದಿಸಲಾಗುತ್ತಿದೆ. ಬಸವಣ್ಣನನ್ನು ಧರ್ಮ ಗುರು ಎಂದು‌ ಹೇಳುವುದಾದ್ರೆ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಅಳವಡಿಸುವಂತಿಲ್ಲ. ಸಂವಿಧಾನದ ಪ್ರಕಾರ ಯಾವುದೇ ಧರ್ಮಗುರುವಿನ ಫೋಟೋವನ್ನ ಸರ್ಕಾರಿ ಕಚೇರಿಯಲ್ಲಿ ಹಾಕುವಂತಿಲ್ಲ. ಈ ಕಾನೂನು ತೊಡಕುಗಳ ಬಗ್ಗೆ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಅಡ್ವೊಕೇಟ್ ಜನರಲ್ ಮಧುಸೂಧನ್ ನಾಯಕ್.

Follow Us:
Download App:
  • android
  • ios