2021ರ ಜನಗಣತಿ ಕಾರ್ಯ ಈ ವರ್ಷದಿಂದಲೆ ಆರಂಭ

First Published 11, Jan 2018, 8:30 AM IST
senses work Begins This Year
Highlights

ದೇಶದ ಎಲ್ಲಾ 130 ಕೋಟಿ ಜನ ಸಂಖ್ಯೆಯನ್ನು ಒಳಗೊಂಡ 2021ರ ಜನಗಣತಿಯ ಕುರಿತಾದ ಕಾರ್ಯ ಈ ವರ್ಷದಿಂದ ಆರಂಭವಾಗಲಿದೆ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

ನವದೆಹಲಿ(ಜ.11): ದೇಶದ ಎಲ್ಲಾ 130 ಕೋಟಿ ಜನ ಸಂಖ್ಯೆಯನ್ನು ಒಳಗೊಂಡ 2021ರ ಜನಗಣತಿಯ ಕುರಿತಾದ ಕಾರ್ಯ ಈ ವರ್ಷದಿಂದ ಆರಂಭವಾಗಲಿದೆ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.

ಜನಗಣತಿಯ ವಿನ್ಯಾಸ ಸೇರಿದಂತೆ ಕೈಗೊಳ್ಳಬೇಕಾದ ವಿಷಯಗಳು ಮತ್ತು ಮಾರ್ಗ ಸೂಚಿಯ ಬಗ್ಗೆ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ.

ಅಲ್ಲದೇ ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕತ್ವ ನೋಂದಣಿಯನ್ನು ಉನ್ನತ ದರ್ಜೆಗೆ ಏರಿಸು ವಿಷಯವೂ ಚರ್ಚೆಗೆ ಬರಲಿದೆ. 2011ರ ಜನಗಣತಿ ವೇಳೆ ಭಾರತದ ಜನಸಂಖ್ಯೆ 121 ಕೋಟಿ ಇತ್ತು.

loader