ಗುಜರಾತ್‌ ಕೇಡರ್‌ ಐಪಿಎಸ್‌ ಅಧಿ​ಕಾರಿ​ಯಾಗಿರುವ ರಜನೀಶ್‌ ರಾಯ್‌ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್‌ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವ​ಹಿಸುತ್ತಿದ್ದಾರೆ.

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ ಹಿರಿಯ ಅಧಿಕಾರಿ​ಯೊಬ್ಬರು, ‘ಸೇನೆ, ಪೊಲೀಸರು ಹಾಗೂ ಸಿಆರ್‌ಪಿಎಫ್‌ ಪಡೆಗಳು ಅಸ್ಸಾಂನಲ್ಲಿ ನಕಲಿ ಎನ್‌ಕೌಂಟರ್‌ ನಡೆಸಿದ್ದವು' ಎಂಬ ಸ್ಫೋಟಕ ವರದಿಯನ್ನು ಸಿಆರ್‌ಪಿಎಫ್‌ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. ಇದು ಭಾರೀ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಜರಾತ್‌ ಕೇಡರ್‌ ಐಪಿಎಸ್‌ ಅಧಿ​ಕಾರಿ​ಯಾಗಿರುವ ರಜನೀಶ್‌ ರಾಯ್‌ ಅವರೇ ಈ ಆರೋಪ ಮಾಡಿದವರು. ಅವರೀಗ ಮೇಘಾಲಯದ ಶಿಲ್ಲಾಂಗ್‌ ಸಿಆರ್‌ಪಿಎಫ್‌ನಲ್ಲಿ ಈಶಾನ್ಯ ವಲಯ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವ​ಹಿಸುತ್ತಿದ್ದಾರೆ.

ಅಸ್ಸಾಂನ ಸಿಮಾಲ್‌ಗುರಿ ಎಂಬಲ್ಲಿ ನ್ಯಾಷನಲ್‌ ಡೆಮಾಕ್ರೆಟಿಕ್‌ ಫ್ರಂಟ್‌ ಆಫ್‌ ಬೋಡೋಲ್ಯಾಂಡ್‌ ಸೋಂಗಬ್ಜಿತ್‌ (ಎನ್‌ಡಿಎಫ್‌ಬಿ-ಎಸ್‌) ಬಣದ ಇಬ್ಬರು ಶಂಕಿತ ಉಗ್ರರನ್ನು ಮಾ 29-30ರಂದು ಅವರಿದ್ದ ಡಿ-ಕಲಿಂಗ್‌ ಗ್ರಾಮದಿಂದ ಬಂಧಿಸಿ, ನಿಶ್ಶಸ್ತ್ರರಾಗಿದ್ದಾಗಲೇ ಈ ಪಡೆಗಳು ಸಾಯಿಸಿವೆ. ಬಳಿಕ ಇದಕ್ಕೆ ಎನ್‌ಕೌಂಟರ್‌ ಮಾಡಲಾಗಿದೆ ಬಣ್ಣ ಕಟ್ಟಲಾಗಿದೆ. ಸುಖಾಸುಮ್ಮನೇ ಶಂಕಿತ ಉಗ್ರರ ಶವದ ಮೇಲೆ ಬಂದೂಕು ಇರಿಸಿ ಅವರು ಭದ್ರತಾಪಡೆಗಳ ಮೇಲೆ ದಾಳಿ ಮಾಡಲು ಬಂದಿದ್ದರು ಎಂದು ಬಿಂಬಿಸಲಾಗಿದೆ.

ಈ ಬಗ್ಗೆ ತನಿಖೆ ಆಗಬೇಕು ಎಂದು ರಜನೀಶ್‌ ರಾಯ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

(ಸಾಂದರ್ಭಿಕ ಚಿತ್ರ)