ಬೆಂಗಳೂರು[ಜು. 31]  ಟಿಪ್ಪು ಜಯಂತಿ ರದ್ದುಗೊಳಿಸಿರುವ ಬಗ್ಗೆ ಸರ್ಕಾರದ ಗಮನ ಸೆಳೆಯೋಣ ಅಂತಾ ಪ್ರಯತ್ನಿಸಿದ್ದೆ. ಅನೇಕ ಮಹನೀಯರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ಮೈಸೂರು ಅರಸನಾಗಿದ್ದವರು, ಬ್ರಿಟಿಷರ ವಿರುದ್ಧ ಹೋರಾಡಿದವರು, ಯುದ್ಧದಲ್ಲಿ ತನ್ನ ಮಕ್ಕಳನ್ನು ಅಡ ಇಟ್ಟವರು. ಟಿಪ್ಪು ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಅಂಥವರ ಜಯಂತಿ ಬ್ಯಾನ್ ಮಾಡಿರುವುದು ಸರಿ ಅಲ್ಲ.

ಕೇವಲ ಟಿಪ್ಪು ಜಯಂತಿಯನ್ನ ಯಾಕೆ ಬ್ಯಾನ್ ಮಾಡಿದ್ರು? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅನ್ನೊ ಬಿಜೆಪಿ ಮಾಡ್ತಿರೋದೇನು? ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪುವನ್ನು ಹಾಡಿ ಹೊಗಳಿದ್ರು. ರಾಷ್ಟ್ರಪತಿ ರಾಮನಾಥ್ ಕೋವಿಂದ್  ಟಿಪ್ಪು ಒಬ್ಬ ದೇಶಭಕ್ತ ಅಂತ ಉಲ್ಲೇಖ ಮಾಡಿದ್ದರು. ಟಿಪ್ಪು ಶೃಂಗೇರಿ ದೇವಸ್ಥಾನ,  ಮೇಲುಕೋಟೆಗೆ ಹಣಕಾಸಿನ ನೆರವು ನೀಡಿದ್ದಕ್ಕೆ ದಾಖಲೆ ಇದೆ ಎಂದು ಹೇಳಿದರು.

ಒಬ್ಬ ಅಲ್ಪಸಂಖ್ಯಾತ ರಾಜನ ಜಯಂತಿಯನ್ನ ಬಿಜೆಪಿ ವಿರೋಧಿಸ್ತಿದೆ. ಸದನದಲ್ಲಿ ಯಾರೂ ಮಂತ್ರಿಗಳಿಲ್ಲ,  ಬಿಎಸ್ ವೈ ಬಿಟ್ಟು ಬೇರೆ ಯಾರಿಗೆ ಹೇಳಬೇಕು. ಸದನದಲ್ಲಿ ಮಾತಾಡೋದು  ಅರಣ್ಯರೋದನವಾಗಿತ್ತು. ಬಿಜೆಪಿ ಅಲ್ಪಸಂಖ್ಯಾತ ರಾಜನ ಜಯಂತಿ ವಿರೋಧಿಸಿ ಕೋಮುವಾದಿ ಪಕ್ಷ ಅನ್ನೋದನ್ನ ನಿರೂಪಿಸಿದೆ. ದ್ವೇಷ ರಾಜಕಾರಣ ಮಾಡಲ್ಲ ಅಂತೇಳಿ,  ಮೂರೇ ದಿನದಲ್ಲಿ ಟಿಪ್ಪು ಜಯಂತಿ ರದ್ದು ಮಾಡ್ತಾರೆ ಸರ್ಕಾರದ ಇಂಥ ಕ್ರಮಗಳ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಹೇಳಿದರು.