Asianet Suvarna News Asianet Suvarna News

ಒಂದು ಕಾಲದ ಸ್ಟಾರ್ ನಟಿಗೆ ಆಸ್ಪತ್ರೆಯ ಬಿಲ್ ಕಟ್ಟಲು ನಯಾಪೈಸೆಯಿಲ್ಲ : ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ

ಒಂದಲ್ಲ ಎರಡಲ್ಲ. ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಿರಿಯ ನಟಿ ಗೀತಾ ಕಪೂರ್. ಇವರ ನಟನೆಯನ್ನ ಕಂಡು, ದೊಡ್ಡ ದೊಡ್ಡ ವ್ಯಕ್ತಿಗಳೇ ಬೆನ್ನು ತಟ್ಟಿದ್ದರು. ಆದರೀಗ ನಟಿಯ ಬಳಿ ಒಂದು ನಯಾ ಪೈಸೆಯೂ ಇಲ್ಲ. ತುತ್ತು ಅನ್ನವನ್ನು ಬೇಡುವ ಸ್ಥಿತಿ ಬಂದೊದಗಿದೆ.

Senior Bollywood actress now at hospital
  • Facebook
  • Twitter
  • Whatsapp

ಸಿನಿಮಾಗಳ ಮೂಲಕ ಜನರನ್ನ ರಂಜಿಸಿದ್ದ ನಟಿಗೆ ಇಂಥಾ ದುರ್ಗತಿ ಬರುತ್ತೆ ಅಂತ ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಬಣ್ಣದ ಬದುಕು ಎಲ್ಲರನ್ನೂ ಕೈ ಬೀಸಿ ಕರೆಯುತ್ತೆ. ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತೆ.  ಅದೇ ರೀತಿ ಬಣ್ಣ ಹಚ್ಚಿದಾಗ ಎಲ್ಲರ ಬದುಕು ಸುಂದರವಾಗಿ ಕಾಣಿಸುತ್ತದೆ. ಆದರೆ ಬಣ್ಣ ಮಾಸಿದ ಮೇಲೆ ಬದುಕು ಹೇಗಿರುತ್ತೆ ಅಂತ ನೋಡಿದರೆ ನಿಜಕ್ಕೂ ನರಕವೇ ಕಣ್ಣೆದುರು ಕಾಣ್ಸುತ್ತೆ. ಈ ನಟಿ ಆಸ್ಪತ್ರೆಯಲ್ಲಿ  ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾಳೆ.  ನೋವು ತಡೆಯಲಾರದೇ ಕಣ್ಣೀರು ಹಾಕ್ತಿದ್ದಾಳೆ. ಒಂದು ಕಾಲದಲ್ಲಿ ಜನರನ್ನು ರಂಜಿಸಿದ ನಟಿ ಈಕೆ. ಬಣ್ಣದ ಲೋಕದಲ್ಲಿ ಭಾರೀ ಹೆಸರು ಮಾಡಿದ್ದಳು. ಈಗ ಯಾರೂ ಇಲ್ಲದೇ ಅನಾಥವಾಗಿದ್ದಾಳೆ. ಆಸ್ಪತ್ರೆಯ ಬಿಲ್ ಕಟ್ಟೋದಕ್ಕೂ ಹಣ ಇಲ್ಲದೇ ಕಣ್ಣೀರಿಡುತ್ತಿದೆ ಈ ಹಿರಿ ಜೀವ.

ಗೀತಾ ಕಪೂರ್

ಒಂದಲ್ಲ ಎರಡಲ್ಲ. ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಹಿರಿಯ ನಟಿ ಗೀತಾ ಕಪೂರ್. ಇವರ ನಟನೆಯನ್ನ ಕಂಡು, ದೊಡ್ಡ ದೊಡ್ಡ ವ್ಯಕ್ತಿಗಳೇ ಬೆನ್ನು ತಟ್ಟಿದ್ದರು. ಆದರೀಗ ಈ ನಟಿಯ ಬಳಿ ಒಂದು ನಯಾ ಪೈಸೆಯೂ ಇಲ್ಲ. ತುತ್ತು ಅನ್ನವನ್ನು ಬೇಡುವ ಸ್ಥಿತಿ ಬಂದೊದಗಿದೆ. ಬಹುತೇಕರು ಈ ಹಿರಿಯ ನಟಿಯನ್ನ ಗುರುತಿಸೋದು ಕಡಿಮೇನೆ.  ಯಾಕಂದರೆ ಈ ನಟಿ ಹೆಸರು ಮಾಡಿದ್ದು ಬಾಲಿವುಡ್​​ ನಲ್ಲಿ. ಪಾಕೀಜಾ, ರಜಿಯಾ ಸುಲ್ತಾನ್​ಗಳಂಥ ನೂರಾರು ಸಿನಿಮಾಗಳಲ್ಲಿ ಸಹ ಕಲಾವಿದೆಯಾಗಿ ನಟಿಸಿದ್ದಾಳೆ. ಬಣ್ಣ ಹಚ್ಚುವಾಗ ಬದುಕು ಸುಂದರವಾಗಿತ್ತು. ಆದರೀಗ ವಿಧಿಯಾಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಈ ಹಿರಿಯ ನಟಿ. ಈ ಹಿರಿಯ ಜೀವಕ್ಕೆ ಮಕ್ಕಳು,ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದರೆ ಅವರು ಈಕೆ ಬಳಿ ಬರ್ತಾ ಇಲ್ಲ.  ಮುಂಬೈ'ನ ಆಸ್ಪತ್ರೆಯಲ್ಲಿ ಅನಾಥವಾಗಿ ಬಿಟ್ಟುಬಿಟ್ಟಿದ್ದಾರೆ. ಮಕ್ಕಳಿಗೆ ಆಸ್ಪತ್ರೆ ಸಿಬ್ಬಂದಿ ಫೋನ್ ಮಾಡಿದ್ರೆ ಎತ್ತುವುದಿಲ್ಲ. ಮಸೇಜ್ ಮಾಡಿದ್ರೆ ನಮಗೆ ತುಂಬ ಕೆಲಸವಿದೆ  ದುಡ್ಡು ಕೊಟ್ಟು ಕಳಿಸುತ್ತೇನೆ ಎಂದು ಉತ್ತರ ನೀಡುತ್ತಾರೆ.

Senior Bollywood actress now at hospital

ತಾನು ಹೆತ್ತ ಮಕ್ಕಳನ್ನ ನೋಡ್ಬೇಕು ಅಂತ ಪರಿತಪಿಸುತ್ತಿದೆ ಈ ತಾಯಿ ಕರುಳು. ಈ ಕರುಳಿನ ಕೂಗು ದುಡ್ಡಿನ ದಾಹದಲ್ಲಿರೋ ಮಕ್ಕಳಿಗೆ ಕೇಳಿಸ್ತಾನೇ ಇಲ್ಲ. ಹೆತ್ತ ತಾಯಿನ್ನೇ ಸಾಕೋಕೆ ಆಗದಿದ್ರೆ, ಕೋಟಿ ಕೋಟಿ ದುಡ್ಡಿದ್ದರೆ ಏನು ಪ್ರಯೋಜನ. ಮುದ್ದು ಮಕ್ಕಳನ್ನೇ ಉಳಿಸಿಕೊಳ್ಳೋದಕ್ಕೆ ಆಗದಿದ್ರೆ, ಏನಿದ್ದು ಏನ್​ ಪ್ರಯೋಜನ. ದುಡ್ಡಿಗಿಂತ ಮಾನವೀಯತೆ ಮುಖ್ಯ. ಆಸ್ತಿಗಿಂತ ಪ್ರೀತಿ ಮುಖ್ಯ. ಹಿರಿಯರನ್ನ ಗೌರವಿಸಿ. ಅವರನ್ನ ಪ್ರೀತಿಯಿಂದ ನೋಡ್ಕೊಳ್ಳಿ.

ವರದಿ: ಶೇಖರ್ , ಸುವರ್ಣ ನ್ಯೂಸ್

Follow Us:
Download App:
  • android
  • ios