Asianet Suvarna News Asianet Suvarna News

ಇಲ್ಲಿ ಸ್ಟಾರ್, ಅಲ್ಲಿ ಸಾಮಾನ್ಯ ಮಹಿಳೆ

ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಕುಳಿತುಕೊಂಡು ಸೋಷಿಯಲ್ ಮೀಡಿಯಾ ಜವಾಬ್ದಾರಿ ನಿರ್ವಹಿಸುವ ರಮ್ಯಾ, ದೆಹಲಿ ಮಾಧ್ಯಮಗಳಿಂದ ಮಾತ್ರ ಪೂರ್ತಿ ದೂರವೇ ಉಳಿದಿದ್ದಾರೆ.

Selected part of Prashanth nathus India Gate column

ಕಾಂಗ್ರೆಸ್‌ನಲ್ಲಿ ಕಳೆದ 5 ತಿಂಗಳಲ್ಲಿ ರಮ್ಯಾ ದಿವ್ಯಸ್ಪಂದನ ಮಾಡುತ್ತಿರುವ ಸೋಷಿಯಲ್ ಮೀಡಿಯಾ ಕೆಲಸದಿಂದ ರಾಹುಲ್ ಗಾಂಧಿ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದ ಪತ್ರಕರ್ತರ ಎದುರು ರಾಹುಲ್, ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿಗಿದ್ದ ಮೇಲುಗೈಯನ್ನು ತಿರುಗಿಸಿ ಕಾಂಗ್ರೆಸ್ ದಾಳಿಗೆ ಮೊನಚು ನೀಡಿದ್ದಾರೆ ಎಂದು ತುಂಬಾ ಹೊಗಳಿದರಂತೆ. ಅಮೆರಿಕ ಪ್ರವಾಸಕ್ಕೆ ಹೋಗುವ ಮುನ್ನ ದೀಪೇಂದ

ರ್ ಹೂಡಾ ಜಾಗದಲ್ಲಿ ರಮ್ಯಾರನ್ನು ಸೋಷಿಯಲ್ ಮೀಡಿಯಾ ಮುಖ್ಯಸ್ಥರ ಹುದ್ದೆಗೆ ತಂದಿದ್ದ ರಾಹುಲ್, 30ರಿಂದ 40 ಪ್ರೊಫೆಷನಲ್ಸ್'ಗಳನ್ನು ನೇಮಿಸಿಕೊಳ್ಳುವ ಅಧಿಕಾರ ನೀಡಿದ್ದರು. ಕಾಂಗ್ರೆಸ್ ವಾರ್ ರೂಮ್‌ನಲ್ಲಿ ಕುಳಿತುಕೊಂಡು ಸೋಷಿಯಲ್ ಮೀಡಿಯಾ ಜವಾಬ್ದಾರಿ ನಿರ್ವಹಿಸುವ ರಮ್ಯಾ, ದೆಹಲಿ ಮಾಧ್ಯಮಗಳಿಂದ ಮಾತ್ರ ಪೂರ್ತಿ ದೂರವೇ ಉಳಿದಿದ್ದಾರೆ. ಒಂದು ವೇಳೆ 2019ರಲ್ಲಿ ಕಾಂಗ್ರೆಸ್ ಅದೃಷ್ಟ ದೆಹಲಿಯಲ್ಲಿ ಕೈಹಿಡಿದರೆ ರಮ್ಯಾ ಗ್ರಹಗತಿಗಳು ಕೂಡ ದೆಹಲಿಯಲ್ಲಿ ಬದಲಾಗಲಿವೆ. ಕರ್ನಾಟಕದಲ್ಲಿ ಚಿತ್ರನಟಿಯಾಗಿ ಮೆರೆದರೂ ದೆಹಲಿಯಲ್ಲಿ ಮಾತ್ರ ರಮ್ಯಾ ಟ್ಯಾಕ್ಸಿಯಲ್ಲಿ ಓಡಾಡುತ್ತಾ ಸಾಮಾನ್ಯ ಕಾರ್ಯಕರ್ತೆಯಂತೆ ಆಗಾಗ ಕಾಣಿಸಿಕೊಳ್ಳುತ್ತಾರೆ. ರಾಜಕಾರಣದಲ್ಲಿ ಚುನಾವಣೆಯ ಒಂದು ಸೋಲು ಏನೇನೆಲ್ಲ ಪಾಠ ಕಲಿಸುತ್ತದೆ ನೋಡಿ.

(ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ)

Latest Videos
Follow Us:
Download App:
  • android
  • ios