ಕಾವೇರಿ ಕಿಚ್ಚಿಗೆ ರೊಚ್ಚಿಗೆದ್ದ ಕನ್ನಡ ಪತ್ರಕರ್ತೆ ; ಮೆತ್ತಗಾದ ತಮಿಳರು

Selected Part of Prashant Natu column july 03 - Part 3
Highlights

  • ಕೇಂದ್ರ ಜಲ ಆಯೋಗದ ಅಧ್ಯಕ್ಷರಿಗೆ ತಮಿಳು ಪತ್ರಕರ್ತರಿಂದ ಪ್ರಶ್ನೆಗಳ ಸುರಿಮಳೆ
  • ತಿರುಗಿಬಿದ್ದ ಕನ್ನಡ ಪತ್ರಕರ್ತೆಯ ಮಾತಿಗೆ ತಣ್ಣಗಾದ ತಮಿಳರು

ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆ ಮುಗಿದ ನಂತರ ಕೇಂದ್ರ ಜಲ ಆಯೋಗದ ಅಧ್ಯಕ್ಷರನ್ನು ಮುತ್ತಿಕೊಂಡ ತಮಿಳು ಪತ್ರಕರ್ತರು ಉಳಿದೆಲ್ಲವನ್ನೂ ಬಿಟ್ಟು ಕರ್ನಾಟಕ ನಿಮ್ಮ ಆದೇಶ ಪಾಲಿಸುತ್ತಿಲ್ಲ ಅಲ್ಲವೇ? ಕರ್ನಾಟಕ ಉದ್ಧಟತನ ತೋರಿಸುತ್ತಿದೆಯೇ? ಕರ್ನಾಟಕ ಮತ್ತೆ ಸುಪ್ರೀಂಕೋರ್ಟ್‌ಗೆ ಹೋಗುವುದೇಕೆ ಎಂದೆಲ್ಲ ಪ್ರಶ್ನೆಗಳ ಸುರಿಮಳೆಗೈದರು. ‘ಇಲ್ಲ ಹಾಗೇನೂ ಆಗಿಲ್ಲ. ಪುಷ್ಕಳ ಮಳೆ ಬಂದಿದೆ. ನೀರು ಸಹಜವಾಗಿ ಹರಿದು ಹೋಗುತ್ತಿದೆ. ನೀರು ಬಿಡಲು ಕರ್ನಾಟಕದ ತಕರಾರು ಏನಿಲ್ಲ’ ಎಂದರೂ ತಮಿಳು ಪತ್ರಕರ್ತರು ಸುಮ್ಮನಾಗುತ್ತಿರಲಿಲ್ಲ. ಕೇಳುವಷ್ಟು ಕೇಳಿದ ಕನ್ನಡದ ಒಬ್ಬ ಪತ್ರಕರ್ತೆ, ‘ನೀವು ಸುದ್ದಿ ವಾಹಕರೋ ಬೆಂಕಿ ಹಚ್ಚುವವರೋ’ ಎಂದಾಗ ತಮಿಳು ಪತ್ರಕರ್ತರು ಸುಮ್ಮನಾದರು. 

[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]

loader