ದೆಹಲಿಯಲ್ಲೂ ಜಮೀರ್ ಫುಲ್ ದಿಲ್‌ದಾರ್

Selected Part of Prashant Natu Column july 03 - Part 2
Highlights

  • ಜಮೀರ್ ಕರ್ನಾಟಕ ಮಾತ್ರವಲ್ಲ ದೆಹಲಿಯಲ್ಲೂ ದಿಲ್ದಾರ್ ಆಗಿರ್ತಾರೆ
  • ನಾನು ಮಂತ್ರಿ ಆಗಿರುವುದಕ್ಕೆ ಸಿದ್ದರಾಮಯ್ಯ ಕಾರಣ ಎಂದ ಸಚಿವ   

ಜಮೀರ್ ಅಹ್ಮದ್ ಖಾನ್ ಬಂದರೆಂದರೆ ಸಾಕು ಕರ್ನಾಟಕ ಭವನದ ಸಿಬ್ಬಂದಿ ಫುಲ್ ಖುಷಿಯಲ್ಲಿರುತ್ತಾರೆ. ಇತ್ತೀಚಿನ ರಾಜಕಾರಣಿಗಳಲ್ಲಿ ತುಸು ಹೆಚ್ಚೇ ದಿಲ್‌ದಾರ್ ಆಗಿರುವ ಜಮೀರ್ ಖಾನ್ ದಿಲ್ಲಿಯಲ್ಲಿ ಇದ್ದರೆ ಭವನದಲ್ಲಿ ತರಹೇವಾರಿ ಭಕ್ಷ್ಯ ಭೋಜನಗಳು. 

ಒಬ್ಬೊಬ್ಬ ಸಿಬ್ಬಂದಿಗೆ ಸಾವಿರಗಟ್ಟಲೆ ಟಿಪ್ಸ್‌ಗಳು. ಜಮೀರ್ ಎಂದೂ ಒಬ್ಬರೇ ಓಡಾಡೋಲ್ಲ. ಅಕ್ಕಪಕ್ಕದಲ್ಲಿ ಮಿತ್ರರ ದಂಡು, ಜಬರ್‌ದಸ್ತ್ ಪರ್ ಫ್ಯೂಮ್ ಪರಿಮಳ ಜಮೀರ್ ಕಾ ಪೆಹಚಾನ್. ಹಿಂದೆ ಕೂಡ ಕುಮಾರಸ್ವಾಮಿ ಜೊತೆ ಬರುತ್ತಿದ್ದ ಜಮೀರ್, ಪತ್ರಕರ್ತರ ಎದುರೇ ಮೊಬೈಲ್ ವಿಡಿಯೋ ತೋರಿಸಿ ನಗಿಸುತ್ತಿದ್ದರು. ಮತ್ತೇಕೆ ದೂರವಾದ್ರಿ ಎಂದು ಪತ್ರಕರ್ತರು ಕೇಳಿದಾಗ ‘ಈಗ ಕುಮಾರಣ್ಣ ಮುಖ್ಯಮಂತ್ರಿ ಬಿಡಿ. ಆದರೆ ಹಿಂದೆ 2003 ರಿಂದ 2006ರ ವರೆಗೆ ನಾನು ಒಂದು ದಿನ ರಮಣಶ್ರೀ ಹೋಟೆಲ್‌ನಲ್ಲಿ ಸಂಜೆ ಭೇಟಿ ಆಗಲಿಲ್ಲ ಎಂದರೆ ವಿಮಾನ ಹತ್ತಿ ಮುಂಬೈಗೆ ಬರುತ್ತಿದ್ದರು.

ಚಾಹೇ ತೋ ತಿಲಕ್ ಬಲ್ಲಾಳಗೆ ಕೇಳ್ರಿ. ಆದರೆ ಪಾಲಿಟಿಕ್ಸ್ ಹಮಾರೆ ದೋಸ್ತಿ ಕೋ ದೂರ ಕರ್‌ದಿಯಾ’ ಎಂದ ಜಮೀರ್, ‘ಕುಚ್ ದರಾರೆ ಮಿಟತಿ ನಹೀ ಅಬ್’ ಎಂದು ಶಾಯರಿ ಮೊರೆ ಹೋದರು. ಆದರೆ ‘ಈಗ ನಾನು ಸಿದ್ದು ಹೇಳಿದರೆ ರಾಜೀನಾಮೆ  ಕೊಡಲೂ ರೆಡಿ. ದೇವೇಗೌಡರನ್ನು ವಿರುದ್ಧ ಹಾಕ್ಕೊಂಡು ಹೆಗಡೆ ತರಹದವರೇ ಮೇಲೇಳಲು ಆಗಲಿಲ್ಲ. ಆದರೆ ನಾನು ಮಂತ್ರಿ ಆಗಿದ್ದೇನೆ ಎಂದರೆ ಅದು ಸಿದ್ದರಾಮಯ್ಯ ಕಾ ಜಬಾನ್ ಸೇ’ ಎಂದರು.

[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]

loader