ಸುಬ್ರಹ್ಮಣಿಯನ್ ಸ್ವಾಮಿಗೆ ಅಮಿತ್ ಶಾರಿಂದ ರಾಜ್ಯಪಾಲ ಹುದ್ದೆಯ ಆಫರ್ ಸ್ವಾಮಿಯವರು ನಯವಾಗಿ ತಿರಸ್ಕರಿಸಿದ ಬಿಜೆಪಿ ನಾಯಕ
ಸದಾ ಸುದ್ದಿಯಲ್ಲಿರಲು ಬಯಸುವ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿಗೆ ಕಳೆದ ವಾರ ಅಮಿತ್ ಶಾ ಫೋನ್ ಮಾಡಿ ನನ್ನನ್ನೊಮ್ಮೆ ಭೇಟಿ ಮಾಡಿ ಎಂದು ಹೇಳಿದಾಗ ಭಾರೀ ಖುಷಿ ಆಗಿತ್ತಂತೆ.
ಅರುಣ್ ಜೇಟ್ಲಿಗೆ ಹುಷಾರಿಲ್ಲದೆ ಇರುವುದರಿಂದ ತನಗೆ ಹಣಕಾಸು ಇಲಾಖೆ ಕೊಡಬಹುದು ಎಂದು ಹುಮ್ಮಸ್ಸಿನಲ್ಲಿಯೇ ಶಾ ಭೇಟಿಗೆ ಹೋದ ಸ್ವಾಮಿ, ಚಹಾ ಕುಡಿದಾದ ಮೇಲೆ ತಾವೇ ಸಂಪುಟದ ವಿಷಯ ತೆಗೆದರಂತೆ.
ಕ್ಯಾಬಿನೆಟ್ ಮೋದಿಜಿ ನೋಡಿಕೊಳ್ಳುತ್ತಾರೆ, ನಿಮ್ಮನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಶಾ ಹೇಳಿದರಂತೆ. ರಾಜ್ಯಪಾಲ ಎಂದರೆ ಬಾಯಿ ಮುಚ್ಚಿ ಕೂರಬೇಕಾಗುತ್ತದೆ, ನನಗೆ ಸಾಧ್ಯವಿಲ್ಲ ಎಂದು ಸ್ವಾಮಿ ನಿರಾಸೆ ಯಿಂದ ವಾಪಸ್ ಬಂದರಂತೆ. ಅಂದಹಾಗೆ ಅವರನ್ನು ರಾಜ್ಯಪಾಲ ಮಾಡುವ ಪ್ರಸ್ತಾಪ ಆರ್‌ಎಸ್‌ಎಸ್ ಕಡೆಯಿಂದ ಇತ್ತಂತೆ.
(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)
ಈ ಸುದ್ದಿಯನ್ನು ಓದಿ : ಕೋರ್ಟ್ ಹಾಲ್ ನಲ್ಲಿ ಪತ್ರಕರ್ತರಿಗೆ ಮೊಬೈಲ್ ಬಳಕೆಗೆ ಅವಕಾಶ
