ನೀವು ಲೋಕಸಭೆಗೆ ನಿಲ್ಲಿ ಸಾರ್ ಎಂದು ಒಬ್ಬ ಯುವ ಪತ್ರಕರ್ತರೊಬ್ಬರು ಸಿದ್ದರಾಮಯ್ಯ ಬಳಿ ಹೇಳಿದರು. ಈಗಲೇ 2 ಬಾರಿ ಲೋಕಸಭೆಗೆ ನಿಂತು ಸೋತಿದ್ದೇನೆ. ಮತ್ತೆ ಸೋಲಿಸೋ ಐಡಿಯಾ ಏನಪ್ಪ ಎಂದ ಸಿದ್ದು, 1984ರಲ್ಲಿ ನಂಜುಂಡಸ್ವಾಮಿ ಹೇಳಿದರು ಎಂದು ಲೋಕಸಭೆ ಚುನಾವಣೆಗೆ ನಿಂತೆ. ಚರಣ ಸಿಂಗ್ ಒಂದು ಲಕ್ಷ ಹಣ ಕೊಟ್ಟಿದ್ದರು.

ಪ್ರೊಫೆಸರ್ ಒಂದು ಕಾರು ಕೊಟ್ಟಿದ್ದರು. ಅದು ಬಂದ್ ಆದಾಗ ನಾನೇ ತಳ್ಳಿಕೊಂಡು ಕ್ಷೇತ್ರದಲ್ಲಿ ಓಡಾಡಿದೆ. ಬರೀ 18 ಸಾವಿರ ಮತ ಬಂತು. 2ನೇ ಬಾರಿ 1991ರಲ್ಲಿ ಕೊಪ್ಪಳಕ್ಕೆ ಹೋಗಿ ನಿಂತೆ. ಎದುರು ನಿಂತಿದ್ದ ಬಸವರಾಜ್ ಪಾಟೀಲ್ ಅನ್ವರಿ ನೀವೇ ಗೆಲ್ಲುತ್ತೀರಿ ಎಂದು ಬಂದು ಕೈಕುಲುಕಿದರು. ಅವತ್ತೇ ರಾತ್ರಿ ರಾಜೀವ್ ಗಾಂಧಿ ಹತ್ಯೆ ಆಯಿತು. 10 ಸಾವಿರದಿಂದ ಸೋತೆ ಎಂದು ಹಳೇ ಕಥೆ ಹೇಳಿ ಕೊಂಡ ಸಿದ್ದು, ಒಂದೂವರೆ ಗಂಟೆ ಪತ್ರಕರ್ತರ ಜತೆ ಹರಟಿದರು.

(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)