ದೇಶದಾದ್ಯಂತ ನವರಾತ್ರಿ ಅಂಗವಾಗಿ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಹಾಗೂ ಉಗ್ರರನ್ನು ಆಧುನಿಕ ರಾವಣರೆಂದು ಅನೇಕರು ದಹಿಸಿದರೆ, ವಿವಾದಾತ್ಮಕ ಜವಾಹರಲಾಲ್‌ ನೆಹರು ವಿವಿಯಲ್ಲಿ (ಜೆಎನ್‌ಯು) ಕಾಂಗ್ರೆಸ್‌ ಪ್ರಾಯೋಜಿತ ಎನ್‌ಎಸ್‌ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ರಾವಣನ ಪ್ರತಿಕೃತಿ ನಿರ್ಮಾಣ ಮಾಡಿ, ಮೋದಿಯನ್ನು ರಾವನಂತೆ ಬಿಂಬಿಸಿ ಪ್ರತಿಕೃತಿ ಸುಟ್ಟಿದ್ದಾರೆ. ಮೋದಿಯಷ್ಟೇ ಅಲ್ಲದೆ, ಯೋಗ ಗುರು ರಾಮ್‌ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್‌ಯು ಉಪಕುಲಪತಿ ಜಗದೀಶ್‌ ಕುಮಾರ್ ಅವರ ಭಾವಚಿತ್ರಗಳನ್ನು ರಾವಣನ ಹತ್ತು ತಲೆಗಳಂತೆ ಬಿಂಬಿಸಿ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಲಾಗಿದೆ.
ನವದೆಹಲಿ(ಅ.13): ದೇಶದಾದ್ಯಂತ ನವರಾತ್ರಿ ಅಂಗವಾಗಿ ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ಉಗ್ರರನ್ನು ಆಧುನಿಕ ರಾವಣರೆಂದು ಅನೇಕರು ದಹಿಸಿದರೆ, ವಿವಾದಾತ್ಮಕ ಜವಾಹರಲಾಲ್ ನೆಹರು ವಿವಿಯಲ್ಲಿ (ಜೆಎನ್ಯು) ಕಾಂಗ್ರೆಸ್ ಪ್ರಾಯೋಜಿತ ಎನ್ಎಸ್ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ರಾವಣನ ಪ್ರತಿಕೃತಿ ನಿರ್ಮಾಣ ಮಾಡಿ, ಮೋದಿಯನ್ನು ರಾವನಂತೆ ಬಿಂಬಿಸಿ ಪ್ರತಿಕೃತಿ ಸುಟ್ಟಿದ್ದಾರೆ. ಮೋದಿಯಷ್ಟೇ ಅಲ್ಲದೆ, ಯೋಗ ಗುರು ರಾಮ್ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್ಯು ಉಪಕುಲಪತಿ ಜಗದೀಶ್ ಕುಮಾರ್ ಅವರ ಭಾವಚಿತ್ರಗಳನ್ನು ರಾವಣನ ಹತ್ತು ತಲೆಗಳಂತೆ ಬಿಂಬಿಸಿ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಲಾಗಿದೆ.
ಈ ರೀತಿ ಮಾಡಲು ವಿದ್ಯಾರ್ಥಿಗಳು ಅನುಮತಿ ಪಡೆದಿದ್ದರೆ ಎಂದು ಜೆಎನ್ಯು ಅಧಿಕಾರಿಗಳನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.
