ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಬಾಬಾ ರಾಮ್ ರಹೀಂ ಸಿಂಗ್’ನ ಸಿರ್ಸಾದಲ್ಲಿರುವ ಡೇರಾ ಸಚಾ ಸೌಧದ ಪ್ರಧಾನ ಕಚೇರಿಯಲ್ಲಿ 2ನೇ ದಿನವೂ ಭದ್ರತಾ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ.

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಬಾಬಾ ರಾಮ್ ರಹೀಂ ಸಿಂಗ್’ನ ಸಿರ್ಸಾದಲ್ಲಿರುವ ಡೇರಾ ಸಚಾ ಸೌಧದ ಪ್ರಧಾನ ಕಚೇರಿಯಲ್ಲಿ 2ನೇ ದಿನವೂ ಭದ್ರತಾ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ಆಘಾತಕಾರಿ ವಿಷಯಗಳು ಬಹಿರಂಗಗೊಂಡಿವೆ.

‘ಗುಫಾ’ ಎಂದು ಗುರುತಿಸಲ್ಪಪಡುವ ಬಾಬಾ ಗುರ್ಮಿತ್ ಸಿಂಗ್’ನ ಖಾಸಗಿ ವಾಸಸ್ಥಾನದಿಂದ ಮಹಿಳಾ ಅನುಯಾಯಿಗಳು ವಾಸಿಸುವ ಹಾಸ್ಟೆಲ್’ಗೆ ನಿರ್ಮಿಸಲಾಗಿರುವ ಸುರಂಗ ಮಾರ್ಗ ಪತ್ತೆಯಾಗಿದೆಯೆಂದು ವರದಿಯಾಗಿದೆ.

ನಿವೃತ್ತ ನ್ಯಾಯಾಧೀಶ ಎಕೆಎಸ್ ಪಂವರ್ ನೇತೃತ್ವದಲ್ಲಿ 700 ಎಕರೆಗಳಲ್ಲಿ ವ್ಯಾಪಿಸಿರುವ ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ರಾಸಯನಿಕ ಹಾಗೂ ಸುಡುಮದ್ದುಗಳ ಕಾರ್ಖಾನೆಯೂ ಪತ್ತೆಯಾಗಿದೆ.

ಶೋಧಕಾರ್ಯದ ಮೊದಲ ದಿನ ಡೇರಾದ ಮಾರುಕಟ್ಟೆಗಳಲ್ಲಿ ಖಾಸಗಿಯಾಗಿ ಚಲಾವಣೆಯಲ್ಲಿದೆಯೆನ್ನಲಾದ ಪ್ಲಾಸ್ಟಿಕ್ ಹಣ ಪತ್ತೆಯಾಗಿತ್ತು.

ಬಾಬಾನ ಡೇರಾದಲ್ಲಿ ಮನೆಗಳು, ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆಗಳು, ಶಾಪಿಂಗ್ ಕಾಂಪ್ಲೆಕ್ಸ್’ಗಳು,ಆಸ್ಪತ್ರೆ, ಸ್ಟೇಡಿಯಂ, ಮನೋರಂಜನಾ ಕ್ಲಬ್’ಗಳು ಇದ್ದು, ತನ್ನದೇ ಆದ MSG ಎಂಬ ಬ್ರಾಂಡ್’ನ ಉತ್ಪನ್ನಗಳು ಲಭ್ಯವಿದೆ.