ಲಂಡನ್[ಮೇ. 02]: ಲಂಡನ್ ನಲ್ಲಿ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಎರಡು ಪಕ್ಷಿಗಳು ಲಂಡನ್ ನಗರದ ಟ್ರಾಫಿಕ್ ಕ್ಯಾಮರಾದೆದುರು ಬಂದು ಕುಳಿತಿವೆ. ಈ ಹಕ್ಕಿಗಳು ಕಳೆದ ಎರಡು ದಿನಗಳಿಂದ ಕ್ಯಾಮರಾದೆದುರು ಹಾರಾಡುತ್ತಿರುವುದು ತಿಳಿದು ಬಂದಿದೆ. ಟ್ವಿಟರ್ ಮೂಲಕ ಇವುಗಳು ಭಾರೀ ವೈರಲ್ ಆಗುತ್ತಿವೆ. 

ಟ್ರಾನ್ಸ್ ಪೋರ್ಟ್ ಫಾರ್ ಲಂಡನ್ ವೆಬ್ ಸೈಟಿನ ಅಧಿಕೃತ ಟ್ವಿಟರ್ ಅಕೌಂಟ್ ನಿಂದ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಇದನ್ನು ಗಮನಿಸಿದ ಫಾಲೋವರ್ಸ್ ಈ ಕುರಿತಾಗಿ ಹೆಚ್ಚಿನ ಮಾಹಿತಿ ನೀಡುವಂತೆ ಕೇಳಿದ್ದಾರೆ. ಈ ಮನವಿಯ ಮೇರೆಗೆ ಹಕ್ಕಿಗಳ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ.

ಟ್ರಾನ್ಸ್ ಪೋರ್ಟ್ ಫಾರ್ ಲಂಡನ್ ನ ಕಾರ್ಮಿಕರು ಈ ಎರಡು ಹಕ್ಕಿಗಳಿಗೆ ಗ್ರೀಮ್ ಹಾಗೂ ಸ್ಟೀವ್ ಎಂದು ಹೆಸರಿಟ್ಟಿದ್ದಾರೆ.