ಅಕ್ಟೋಬರ್​ 16ರಂದು ನಡೆದಿದ್ದ ರುದ್ರೇಶ್​ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ  SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು.

ಬೆಂಗಳೂರು(ಸೆ.12): ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆ ಖಂಡಿಸಿ ಇಂದು ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಪ್ರತಿರೋಧ ಸಮಾವೇಶ ನಡೆಯುತ್ತಿದೆ.

ಈ ಪ್ರತಿರೋಧ ಸಮಾವೇಶದಲ್ಲಿ SDPI ಪಕ್ಷ ಕೂಡಾ ಭಾಗಿಯಾಗಿದೆ. ಆದರೆ SDPI (ಸೋಶಿಯಲ್​ ಡೆಮಾಕ್ರೆಟಿಕ್​ ಪಾರ್ಟಿ ಆಫ್​ ಇಂಡಿಯಾ) ಪಕ್ಷದ ಮೇಲೆ ರುದ್ರೇಶ್​ ಹತ್ಯೆ ಪ್ರಕರಣದ ಆರೋಪ ಇದೆ.

ಅಕ್ಟೋಬರ್​ 16ರಂದು ನಡೆದಿದ್ದ ರುದ್ರೇಶ್​ ಹತ್ಯೆ ನಡೆದಿತ್ತು. ಈ ಹತ್ಯೆಯ ಹಿಂದೆ SDPI ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇಂತಹ ಆರೋಪವಿರುವ ಪಕ್ಷ, ಗೌರಿ ಲಂಕೇಶ್​ ಹತ್ಯೆಯ ನ್ಯಾಯಕ್ಕಾಗಿ, ಸಮಾವೇಶದಲ್ಲಿ ಪಾಲ್ಗೊಂಡಿರೋದು ಚರ್ಚೆಗೆ ಗ್ರಾಸವಾಗಿದೆ.