ಅಕ್ಟೋಬರ್​ 15ಕ್ಕೆ ಪ್ರಳಯ ಫಿಕ್ಸ್​ ಆಗಿದೆ. ಯಾರ್ ಬಂದ್ರೂ ಭೂಮಿ ಉಯಳಿಯೋದಿಲ್ಲ ನಿಬಿರು ಎನ್ನುವ ಗ್ರಹ ಬಂದು ಭೂಮಿಯನ್ನ ಛಿದ್ರ ಛಿದ್ರ ಮಾಡುತ್ತೆ. ಹೀಗಂತ ಹೇಳಿದ್ದು, ಒಬ್ಬ ಸೈಂಟಿಸ್ಟ್​. ಆ ಸೈಂಟಿಸ್ಟ್​ ಹಿಂದಿನ ಅಸಲೀತನ ಹುಡುಕ್ತಾ ಹೋದರೆ, ನಿಜಕ್ಕೂ ಪ್ರಳಯಕ್ಕಿಂತಲೂ ಭಯಾನಕವಾದ ಸುದ್ದಿ ಹೊರ ಬೀಳುತ್ತದೆ.

ನವದೆಹಲಿ(ಅ.10): ಅಕ್ಟೋಬರ್​ 15ಕ್ಕೆ ಪ್ರಳಯ ಫಿಕ್ಸ್​ ಆಗಿದೆ. ಯಾರ್ ಬಂದ್ರೂ ಭೂಮಿ ಉಯಳಿಯೋದಿಲ್ಲ ನಿಬಿರು ಎನ್ನುವ ಗ್ರಹ ಬಂದು ಭೂಮಿಯನ್ನ ಛಿದ್ರ ಛಿದ್ರ ಮಾಡುತ್ತೆ. ಹೀಗಂತ ಹೇಳಿದ್ದು, ಒಬ್ಬ ಸೈಂಟಿಸ್ಟ್​. ಆ ಸೈಂಟಿಸ್ಟ್​ ಹಿಂದಿನ ಅಸಲೀತನ ಹುಡುಕ್ತಾ ಹೋದರೆ, ನಿಜಕ್ಕೂ ಪ್ರಳಯಕ್ಕಿಂತಲೂ ಭಯಾನಕವಾದ ಸುದ್ದಿ ಹೊರ ಬೀಳುತ್ತದೆ.

ಇದೇ ಥರ ಅಕ್ಟೋಬರ್​ 15ಕ್ಕೆ ಭೂಮಿಗೆ ಬಂದು ನಿಬಿರು ಅನ್ನೋ ಕ್ಷುದ್ರ ಗ್ರಹ ಅಪ್ಪಳಿಸುತ್ತೆ. ಆಗ ಇಡೀ ಭೂಮಿಯೇ ಛಿದ್ರ ಛಿದ್ರವಾಗುತ್ತಂತೆ. ಇನ್ನೇನು ಜಸ್ಟ್ ಐದೇ ದಿನ ಅಷ್ಟೇ. ಆರನೇ ದಿನ ಈ ಭೂಮಿನೇ ಉಳಿಯೋದಿಲ್ಲ. ಇಡೀ ಭೂಮಂಡಲವೇ ನಾಶವಾಗುತ್ತೆ ಅಂತ ವಿಜ್ಞಾನಿಯೊಬ್ಬ ಭವಿಷ್ಯ ನುಡಿದಿದ್ದಾನೆ. ಆ ವಿಜ್ಞಾನಿ ಯಾರು ಗೊತ್ತಾ? ಇಲ್ಲಿದ್ದಾನೆ ನೋಡಿ.

ಡೇವಿಡ್​ ಮೇಡ್ ಎನ್ನುವ ವಿಜ್ಞಾನಿ ಇನ್ನೈದು ದಿನ ಗಳಲ್ಲಿ ಭೂಮಿಗೆ ನಿಬಿರು ಅಪ್ಪಳಿಸುತ್ತೆ. ಭೂಮಿ ನಾಶವಾಗುತ್ತೆ ಅಂತ ಹೇಳಿದ್ದಾರೆ. ಆದರೆ ಈತ ಸೈಂಟಿಸ್ಟೂ ಅಲ್ಲ, ಅತ್ತ ಜ್ಯೋತಿಷಿನೂ ಅಲ್ಲ. ತನ್ನನ್ನ ತಾನು ಸಂಶೋಧಕ ಅಂತ ಹೇಳಿಕೊಳ್ಳೋ ಈ ಎಡಬಿಡಂಗಿ. ಪ್ಲಾನೆಟ್ ಎಕ್ಸ್​ ಅನ್ನೋ ವೆಬ್​'ಸೈಟ್​ನಲ್ಲಿ ಪ್ರಳಯದ ಬಗ್ಗೆ ಭೀತಿ ಹುಟ್ಟಿಸಲಾಗ್ತಿದೆ. ಆದರಿದು ಡೋಂಗಿ ವೆಬ್​'ಸೈಟ್​​ ಪ್ರಚಾರಕ್ಕೆ ಪೂರಕವಾಗ್ತಿದೆಯೇ ಹೊರತು, ಪ್ರಳಯ ಆಗೋ ವಿಚಾರಾನೇ ಇಲ್ಲಿಲ್ಲ.

ಹೀಗಾಗಿ ಈ ಡೋಂಗಿ ಸೈಂಟಿಸ್ಟ್​ ಹೇಳಿದ ಮಾತಿಗೆ ಜನ ಆತಂಕಪಡುವ ಅಗತ್ಯವಿಲ್ಲ ಯಾಕಂದ್ರೆ ಪ್ರಳಯ ಆಗೋದೇ ಇಲ್ಲ ಸೋ ಡೋಂಟ್​ ವರಿ.