ಲಂಡನ್(ಅ.03): ಲಂಡನ್'ನ ಟ್ಯಾಮ್ವರ್ತ್'ನಲ್ಲಿನ ಶಾಲೆಯ ಪಕ್ಕದಲ್ಲಿರುವ ರಸ್ತೆಯಲ್ಲಿ ವಿದ್ಯಾರ್ಥಿನಿಯರಿಬ್ಬರು ಜಗಳವಾಡಿದ್ದು, ಸದ್ಯ ಇದೀಗ ಇವರಿಬ್ಬರ ಜಡೆಜಗಳದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

13 ವರ್ಷದ ಡೆಮ್ಮಿ ಹೆಸರಿನ ವಿದ್ಯಾರ್ಥಿನಿಯೊಬ್ಬಳನ್ನು ಕೆಲ ವಿದ್ಯಾರ್ಥಿಗಳು ಸೇರಿ ಮನಬಂದಂತೆ ಥಳಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ ತನ್ನನ್ನು ಬಿಡುವಂತೆ ಬೇಡಿಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆದರೂ ಆಕೆಯನ್ನು ಬಿಡದ ವಿದ್ಯಾರ್ಥಿಗಳು ಒಬ್ಬರಾದ ಬಳಿಕ ಒಬ್ಬರಂತೆ ಆಕೆಯ ಮುಖಕ್ಕೆ ಗುದ್ದಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹಲ್ಲೆ ನಡೆಸಿರುವ ವಿದ್ಯಾರ್ಥಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.