2002ರಲ್ಲಿ ಖಾಸಗಿ ಜಾಗವನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿತ್ತು. ಈ ಬಾಡಿಗೆ ಹಣ 10 ಕೋಟಿ ರು. ದಾಟಿತ್ತು. ಆದರೆ ಲತಾ ಅವರ ಟ್ರಸ್ಟ್ ಕೇವಲ 2 ಕೋಟಿ ರು. ನೀಡುವುದಾಗಿ ಹೇಳುತ್ತಿದೆ
ಚೆನ್ನೈ(ಆ.17): ಖ್ಯಾತ ನಟ ರಜನೀಕಾಂತ್‌ರ ಪತ್ನಿ ಲತಾ ರಜನೀಕಾಂತ್ ನಡೆಸುವ ರಾಘವೇಂದ್ರ ಪ್ರತಿಷ್ಠಾನದ ಅನುದಾನದಲ್ಲಿ ನಡೆಸಲಾಗುವ ಆಶ್ರಮ ಮೆಟ್ರಿಕ್ಯುಲೇಶನ್ ಶಾಲೆ ಬಾಡಿಗೆ ಪಾವತಿಸಲಾಗದೆ ಮುಚ್ಚಲ್ಪಟ್ಟಿದೆ. ಗುಂಡಿ ಎಂಬಲ್ಲಿರುವ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದು, ಅವರನ್ನು ಪಕ್ಕದ ವೆಲಚೇರಿಯಲ್ಲಿ ಇರುವ ಇದೇ ಸಂಸ್ಥೆಯ ಐಸಿಎಸ್‌ಇ ಶಾಲೆಗೆ ವರ್ಗಾಯಿಸಲಾಗಿದೆ. 2002ರಲ್ಲಿ ಖಾಸಗಿ ಜಾಗವನ್ನು ಬಾಡಿಗೆ ಆಧಾರದಲ್ಲಿ ಪಡೆಯಲಾಗಿತ್ತು. ಈ ಬಾಡಿಗೆ ಹಣ 10 ಕೋಟಿ ರು. ದಾಟಿತ್ತು. ಆದರೆ ಲತಾ ಅವರ ಟ್ರಸ್ಟ್ ಕೇವಲ 2 ಕೋಟಿ ರು. ನೀಡುವುದಾಗಿ ಹೇಳುತ್ತಿದೆ.
ಕಟ್ಟಡದ ಸೇವಾ ತೆರಿಗೆ ಪ್ರತಿ ತಿಂಗಳಿಗೆ 60 ಸಾವಿರ ರು. ಬರುತ್ತಿದ್ದು, ಅದನ್ನು ಪಾವತಿಸಲು ಕಷ್ಟವಾಗುತ್ತಿದೆ. ಹೀಗಾಗಿ ಶಾಲಾ ಗೇಟ್‌ಗೆ ಬೀಗ ಹಾಕಲು ನಿರ್ಧರಿಸಬೇಕಾಯಿತು ಎಂದು ಶಾಲಾ ಆವರಣದ ಮಾಲೀಕ ವೆಂಕಟೇಶ್ವರಲು ಹೇಳಿದ್ದಾರೆ. ಆದರೆ ಆರೋಪಗಳನ್ನು ನಿರಾಕರಿಸಿರುವ ಲತಾ ರಜನೀಕಾಂತ್, ಶಾಲಾ ಕಟ್ಟಡ ಮಾಲೀಕರು ದೌರ್ಜನ್ಯ ಎಸಗುತ್ತಿದ್ದಾರೆ ಎಂದಿದ್ದಾರೆ.
