3 ಸಚಿವರಿಗೆ 50 ಕೋಟಿ ರೂಪಾಯಿಯನ್ನು ಲಂಚ ನೀಡಲಾಗಿದೆ ಎಂಬ ಆರೋಪದ ಮೇರೆಗೆ, 16 ಕಡೆ ಗುತ್ತಿಗೆ ಕಚೇರಿಗಳಿಗೆ ಐಟಿ ದಾಳಿ ನಡೆದಿದೆ. ಇದೇ ವಿಚಾರವಾಗಿ ಜನಾರ್ದನ ಪೂಜಾರಿ ಆರೋಪಿ ಸಚಿವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಅಲ್ಲದೆ ಹೈಕಮಾಂಡ್ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಿಎಂಗೆ ನಿರ್ದೇಶನ ನೀಡಬೇಕು ಎಂದಿದ್ದಾರೆ.

ಮಂಗಳೂರು(ನ.29): ಎತ್ತಿನಹೊಳೆ ಯೋಜನೆಯಲ್ಲಿ ದೊಡ್ಡ ಹಗರಣ ನಡೆದಿದ್ದು, ಆಂಧ್ರ ಮೂಲದ ಕಳಂಕಿತ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಇದರಲ್ಲಿ ರಾಜ್ಯದ 3 ಸಚಿವರು ಈ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಗಂಭೀರ ಆರೋಪ ಮಾಡಿದ್ದಾರೆ.

3 ಸಚಿವರಿಗೆ 50 ಕೋಟಿ ರೂಪಾಯಿಯನ್ನು ಲಂಚ ನೀಡಲಾಗಿದೆ ಎಂಬ ಆರೋಪದ ಮೇರೆಗೆ, 16 ಕಡೆ ಗುತ್ತಿಗೆ ಕಚೇರಿಗಳಿಗೆ ಐಟಿ ದಾಳಿ ನಡೆದಿದೆ. ಇದೇ ವಿಚಾರವಾಗಿ ಜನಾರ್ದನ ಪೂಜಾರಿ ಆರೋಪಿ ಸಚಿವರನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಅಲ್ಲದೆ ಹೈಕಮಾಂಡ್ ಕೂಡಾ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಿಎಂಗೆ ನಿರ್ದೇಶನ ನೀಡಬೇಕು ಎಂದಿದ್ದಾರೆ.

ಈ ಹಗರಣದ ಕುರಿತಾಗಿ ಮತ್ತಷ್ಟು ಮಾತನಾಡಿದ ಜನಾರ್ಧನ ಪೂಜಾರಿ ವಿಚಾರಣೆ ನಡೆಸಿ ರಾಜ್ಯದ ಜನರಿಗೆ ಸತ್ಯಾಂಶ ತಿಳಿಸಿ ಇಲ್ಲದಿದ್ದರೆ ಈ ಆರೋಪದಲ್ಲಿ ನೀವೂ ಭಾಗಿ ಎಂದು ಜನ ತಿಳಿದುಕೊಳ್ಳುತ್ತಾರೆ. ಸಿಎಂ ಪಕ್ಷದ ಮರ್ಯಾದೆಯನ್ನು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಜನ ನಿಮ್ಮನ್ನು ಕ್ಷಮಿಸಲಾರರು ಎಂದು ಸಿಎಂಗೆ ಸಲಹೆ ನೀಡಿದ್ದಾರೆ.