Asianet Suvarna News Asianet Suvarna News

ಗೋರಕ್ಷಣೆ: ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸುಪ್ರೀಂ ನೋಟಿಸ್

ಗೋರಕ್ಷಕರ ಮೇಲೆ ನಿಷೇಧ ಹೇರುವಂತೆ ಹಾಗೂ ಗೋರಕ್ಷಣೆ ಹೆಸರಿನಲ್ಲಿ ನಡೆದ ಎಲ್ಲಾ ಹಿಂಸಾಕೃತ್ಯಗಳನ್ನು ತನಿಖೆ ನಡೆಸುವಂತೆ ಕೋರಿ ತಹ್ಸೀನ್ ಪೂನವಾಲಾ ಎಂಬ ಸಾಮಾಜಿಕ ಕಾರ್ಯಕರ್ತ ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

SC seeks detailed reply from Rajasthan on Alwar violence

ನವದೆಹಲಿ (ಏ.07):  ರಾಜಸ್ಥಾನದ ಅಲ್ವಾರ್’ನಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಥಳಿಸಿ ಕೊಂದ ಅಮಾನವೀಯ ಘಟನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ರಾಜಸ್ಥಾನ್ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಘಟನೆಯ ಕುರಿತಂತೆ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ.

ಗೋರಕ್ಷಕರ ಮೇಲೆ ನಿಷೇಧ ಹೇರುವಂತೆ ಹಾಗೂ ಗೋರಕ್ಷಣೆ ಹೆಸರಿನಲ್ಲಿ ನಡೆದ ಎಲ್ಲಾ ಹಿಂಸಾಕೃತ್ಯಗಳನ್ನು ತನಿಖೆ ನಡೆಸುವಂತೆ ಕೋರಿ ತಹ್ಸೀನ್ ಪೂನವಾಲಾ ಎಂಬ ಸಾಮಾಜಿಕ ಕಾರ್ಯಕರ್ತ ಸುಪ್ರೀಂ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರಾಜಸ್ಥಾನ ಜೊತೆಗೆ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ,  ಕರ್ನಾಟಕ ಹಾಗೂ ಜಾರ್ಖಂಡ್ ಸರ್ಕಾರಗಳಿಗೂ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 3ರಕ್ಕೆ ನಿಗದಿಪಡಿಸಲಾಗಿದೆ.

ಕಳೆದ ಏ.1ರಂದು ಹರ್ಯಾಣಗೆ ಗೋವುಗಳನ್ನು ಸಾಗಿಸುತ್ತಿದ್ದ ಪೆಹ್ಲು ಖಾನ್ ಹಾಗೂ ತರ ನಾಲ್ಕು ಮಂದಿಯ ಮೇಲೆ ಸ್ವಘೋಷಿತ ಗೋರಕ್ಷಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪೆಹ್ಲು ಖಾನ್ ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Follow Us:
Download App:
  • android
  • ios