ನಿರ್ಣಾಯಕ ಹಂತ ತಲುಪಿದ ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ವಿಚಾರಣೆ| ರಂಜನ್ ಗಗೋಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣ| ಗಗೋಯ್ ವಿರುದ್ಧ ಷಡ್ಯಂತ್ರ ಎಂದ ವಕೀಲ ಉತ್ಸವ್ ಬೈನ್ಸ್| ‘ಷಡ್ಯಂತ್ರ ನಿಜವಾದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲು’| ಗಂಭೀರ ಆತಂಕ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್| ಷಡ್ಯಂತ್ರದ ಸಾಕ್ಷ್ಯಾಧಾರಗಳಿವೆ ಎಂದ ಉತ್ಸವ್ ಬೈನ್ಸ್|
ನವದೆಹಲಿ(ಏ.24): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತ ತಲುಪಿದೆ.
ಈ ಮಧ್ಯೆ ಸಿಜೆಐ ವಿರುದ್ಧದ ಷಡ್ಯಂತ್ರ ಆರೋಪ ನಿಜವೇ ಆದರೆ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ರಂಜನ್ ಗಗೋಯ್ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಉತ್ಸವ್ ಬೈನ್ಸ್, ಗಗೋಯ್ ವಿರುದ್ಧದ ಷಡ್ಯಂತ್ರ ನಡೆಸಿರುವ ಕುರಿತು ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದಾರೆ.
ಉತ್ಸವ್ ಬೈನ್ಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ತ್ರಿಸದಸ್ಯ ಪೀಠ, ಒಂದು ವೇಳೆ ರಂಜನ್ ಗಗೋಯ್ ವಿರುದ್ಧ ಷಡ್ಯಂತ್ರ ನಡೆದಿರುವುದು ನಿಜವಾದರೆ ಭಾರತದ ನ್ಯಾಯಾಂಗ ವ್ಯವಸ್ಥೆಯೇ ಬುಡಮೇಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
