ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಲಭಿಸುತ್ತಿರುವ ಬಡ್ತಿ ಮೀಸಲಾತಿಯನ್ನು ಬಡ್ತಿ ಸಿಕ್ಕಂತೆಲ್ಲಾ ಹಂತಹಂತವಾಗಿ ಕಡಿತಗೊಳಿಸುವ ಸಾಧ್ಯಾಸಾಧ್ಯತೆ ಕುರಿತು ಪರಿಶೀಲಿಸಲು ಸುಪ್ರೀಂಕೋರ್ಟ್ ಚಿಂತನೆ ನಡೆಸಿದೆ. 

ಇದು ಜಾರಿಗೆ ಬಂದರೆ ಆರಂಭಿಕ ಹಂತದಲ್ಲಿ ಬಡ್ತಿ ಮೀಸಲಾತಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಪೂರ್ಣವಾಗಿ ಲಭಿಸುತ್ತದೆ. ಹಂತಹಂತವಾಗಿ ಅವರು ಹುದ್ದೆಯಲ್ಲಿ ಮೇಲೆ ಹೋದಂತೆಲ್ಲಾ ಮೀಸಲಾತಿ ಪ್ರಮಾಣ ಕಡಿಮೆಯಾಗಲಿದೆ. 

ಮೊದಲ ಹಾಗೂ ಕೊನೆಯ ಬಡ್ತಿ ಮೀಸಲಾತಿ ಪ್ರಮಾಣ ಒಂದೇ ಇರಕೂಡದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.