Asianet Suvarna News Asianet Suvarna News

ಕೋರ್ಟ್‌ ಕಲಾಪ ನೇರಪ್ರಸಾರಕ್ಕೆ ಸುಪ್ರೀಂ ಒಪ್ಪಿಗೆ

 ನ್ಯಾಯಾಲಯ ಕಲಾಪಗಳ ನೇರಪ್ರಸಾರಕ್ಕೆ ಸರ್ವೋಚ್ಚ ನ್ಯಾಯಾಲಯ  ಒಪ್ಪಿಗೆ ದೊರಕಿದೆ. ಇದರೊಂದಿಗೆ ನ್ಯಾಯಾಂಗ ಪಾರದರ್ಶಕತೆಯ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇರಿಸಿದಂತಾಗಿದೆ.

SC For Live Streaming Video Recording Of Court Proceeding
Author
Bengaluru, First Published Sep 27, 2018, 9:26 AM IST

ನವದೆಹಲಿ :  ನ್ಯಾಯಾಲಯ ಕಲಾಪಗಳ ನೇರಪ್ರಸಾರಕ್ಕೆ ಸರ್ವೋಚ್ಚ ನ್ಯಾಯಾಲಯ ಬುಧವಾರ ಒಪ್ಪಿಗೆ ನೀಡಿದೆ. ಇದರೊಂದಿಗೆ ನ್ಯಾಯಾಂಗ ಪಾರದರ್ಶಕತೆಯ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇರಿಸಿದಂತಾಗಿದೆ.

ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್‌ ಮಿಶ್ರಾ, ನ್ಯಾ.ಎ.ಎಂ. ಖಾನ್ವಿಲ್ಕರ್‌ ಹಾಗೂ ನ್ಯಾ.ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಮಾನ ಪ್ರಕಟಿಸಿತು. ‘ಸೂರ್ಯನ ಬೆಳಕು ಅತ್ಯುತ್ತಮ ಸೋಂಕು ನಿವಾರಕ’ ಎಂಬ ಮಹತ್ವದ ಅಭಿಪ್ರಾಯವನ್ನು ಅದು ವ್ಯಕ್ತಪಡಿಸಿತು.

ನೇರಪ್ರಸಾರಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಶೀಘ್ರ ನಿರೂಪಿಸಲಾಗುವುದು. ಈ ವೇಳೆ ಸಾರ್ವಜನಿಕರು ಹಾಗೂ ಅರ್ಜಿದಾರರ ಹಿತಾಸಕ್ತಿಯ ಸಮತೋಲನ ಕಾಯ್ದುಕೊಳ್ಳಲಾಗುವುದು ಎಂದು ನ್ಯಾಯಪೀಠ ಭರವಸೆ ನೀಡಿತು.

ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್‌ ಮಿಶ್ರಾ ಹಾಗೂ ನ್ಯಾ.ಖಾನ್ವಿಲ್ಕರ್‌ ಅವರು ಒಂದೇ ರೀತಿಯ ತೀರ್ಪು ಪ್ರಕಟಿಸಿದರೆ, ನ್ಯಾ.ಚಂದ್ರಚೂಡ ಅವರು ಪ್ರತ್ಯೇಕ ತೀರ್ಪು ಪ್ರಕಟಿಸಿದರು. 

‘ಕೋರ್ಟ್‌ ಕಲಾಪಗಳ ನೇರ ಪ್ರಸಾರದಿಂದ ಸಾರ್ವಜನಿಕರ ‘ತಿಳಿದುಕೊಳ್ಳುವ ಹಕ್ಕು’ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ. ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಕಾಣಿಸಿಕೊಳ್ಳಲಿದೆ’ ಎಂದು ಅದು ಹೇಳಿತು.

ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ಕಾನೂನು ವಿದ್ಯಾರ್ಥಿ ಸ್ನೇಹಿಲ್‌ ತ್ರಿಪಾಠಿ ಹಾಆಗೂ ಸೆಂಟರ್‌ ಫಾರ್‌ ಅಕೌಂಟೆಬಿಲಿಟಿ ಆ್ಯಂಡ್‌ ಸಿಸ್ಟಮೆಟಿಕ್‌ ಚೇಂಜ್‌ ಎಂಬ ಸಂಸ್ಥೆಗೆ ಸೇರಿದವರು ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಕೇಂದ್ರ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿ, ನೇರಪ್ರಸಾರಕ್ಕೆ ತನ್ನದೇನೂ ಅಭ್ಯಂತರವಿಲ್ಲ ಎಂದು ತಿಳಿಸಿತ್ತು.

Follow Us:
Download App:
  • android
  • ios