Asianet Suvarna News Asianet Suvarna News

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗಳು 6 ತಿಂಗಳು ಒಟ್ಟಿಗೆ ವಾಸಿಸುವುದು ಕಡ್ಡಾಯವೇನಿಲ್ಲ: ಸುಪ್ರೀಂಕೋರ್ಟ್

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಗಳು 6 ತಿಂಗಳುಗಳ ಕಾಲ ಒಟ್ಟಿಗೆ ವಾಸ ಮಾಡುವ ಅವಧಿ ಕಡ್ಡಾಯವೇನಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದಂಪತಿಗಳ ಪರಸ್ಪರ ಸಮ್ಮತಿ ಇದ್ದರೆ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸಬೇಕೆನ್ನುವ ಕಡ್ಡಾಯವೇನಿಲ್ಲವೆಂದು ಕೋರ್ಟ್ ಹೇಳಿದೆ.

SC Cuts Down Waiting Period for Divorce Under Hindu Law by Six Months

ನವದೆಹಲಿ (ಸೆ.12): ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಗಳು 6 ತಿಂಗಳುಗಳ ಕಾಲ ಒಟ್ಟಿಗೆ ವಾಸ ಮಾಡುವ ಅವಧಿ ಕಡ್ಡಾಯವೇನಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ದಂಪತಿಗಳ ಪರಸ್ಪರ ಸಮ್ಮತಿ ಇದ್ದರೆ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸಬೇಕೆನ್ನುವ ಕಡ್ಡಾಯವೇನಿಲ್ಲವೆಂದು ಕೋರ್ಟ್ ಹೇಳಿದೆ.

ನ್ಯಾ. ಉದಯ್ ಯು ಲಲಿತ್ ಹಾಗೂ ಆದರ್ಶ್ ಕೆ ಗೋಯಲ್ ನೇತೃತ್ವದ ನ್ಯಾಯಪೀಠವು ಈ ಮಹತ್ತರ ತೀರ್ಪನ್ನು ನೀಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಗಳು ವಿಚ್ಛೇದನ ಪಡೆಯಲು 18 ತಿಂಗಳು ಕಾಯಬೇಕಾಗುತ್ತದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13(ಬಿ) ಅಡಿಯಲ್ಲಿ ದಂಪತಿಗಳು 1 ವರ್ಷ ಬೇರೆ ಬೇರೆಯಾಗಿ ವಾಸಿಸಬೇಕು. ಸೆಕ್ಷನ್ 13ಬಿ (2) ರ ಅಡಿಯಲ್ಲಿ ತಿಂಗಳು ಒಟ್ಟಿಗೆ ವಾಸ ಮಾಡಬೇಕು. ಆದರೆ ದಂಪತಿಗಳು ಒಪ್ಪಿಗೆ ಸೂಚಿಸಿದರೆ 6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸುವುದನ್ನು ರದ್ದು ಮಾಡಿ ವಿಚಾರಣೆಯನ್ನು ತ್ವರಿತಗೊಳಿಸಬಹುದು. ಇದು ಕಡ್ಡಾಯವೇನಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನಾವು ಕಳೆದ 8 ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ. 6 ತಿಂಗಳುಗಳ ಕಾಲ ಒಟ್ಟಿಗೆ ಬಾಳುವುದರಿಂದ ನಮ್ಮಿಬ್ಬರ ನಡುವೆ ಹೊಂದಾಣಿಕೆ ಮೂಡಲು ಸಾಧ್ಯವೇ ಇಲ್ಲ. ಹಾಗಾಗಿ  6 ತಿಂಗಳುಗಳ ಕಾಲ ಒಟ್ಟಿಗೆ ವಾಸಿಸುವುದನ್ನು ರದ್ದು ಮಾಡಿ ಎಂದು ದೆಹಲಿ ಮೂಲದ ದಂಪತಿಗಳೊಬ್ಬರು ಸುಪ್ರೀಂಕೋರ್ಟ್’ಗೆ ಕೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.

  

Follow Us:
Download App:
  • android
  • ios