ಹೊಸ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಉದಯ್ ಲಲಿತ್ ಇರುವುದಿಲ್ಲ.
ಬೆಂಗಳೂರು(ಅ.8): ಕಾವೇರಿ ನೀರು ಹಂಚಿಕೆ ವಿಚಾರಣೆಗೆ ಸುಪ್ರಿಂ ಕೋರ್ಟ್ ತ್ರಿಸದಸ್ಯ ಪೀಠವನ್ನು ಪುನರಚಿಸಿದೆ. ಹೊಸದಾಗಿ ರಚಿಸಿರುವ ಪೀಠದಲ್ಲಿ ನ್ಯಾ.ದೀಪಕ್ ಮಿಶ್ರಾ, ನ್ಯಾ.ಅಮಿತಾಬ್ ರಾಯ್,
ನ್ಯಾ. ಖನ್ವಿಲ್ಕರ್ ಒಳಗೊಂಡಿರುತ್ತಾರೆ. ಹೊಸ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಉದಯ್ ಲಲಿತ್ ಇರುವುದಿಲ್ಲ. ಹಲವು ವರ್ಷಗಳ ಕಾಲ ಜಯಲಲಿತಾ ಪರ ವಕೀಲರಾಗಿದ್ದ ಉದಯ್ ಲಲಿತ್ ಕಾವೇರಿ ವಿಚಾರಣಾ ಸಮಿತಿಯ ದ್ವಿಸದಸ್ಯ ಪೀಠದಲ್ಲಿ ಒಬ್ಬರಾಗಿದ್ದರು. ಇವರು ವಿಚಾರಣೆ ನಡೆಸಬಾರದಂದು ಕರ್ನಾಟಕ ಮನವಿ ಸಲ್ಲಿಸಿತ್ತು. ಕರ್ನಾಟಕದ ಮನವಿಗೆ ಸುಪ್ರಿಂ ಮನ್ನಣೆ ನೀಡಿದೆ.
