ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಬಡ್ಡಿ ದರ ಮತ್ತು ಸಾಲದ ಬಡ್ಡಿ ದರ (ಬಿಪಿಎಲ್ಆರ್) ತಲಾ ಶೇ.0.30 ಅಂಕಗಳಷ್ಟು ಕಡಿತಗೊಳಿಸಿದೆ. ಇದು ಹಳೆಯ ಸಾಲದ ದರ ಅನ್ವಯಿಸುವ ಸುಮಾರು 80 ಲಕ್ಷದಷ್ಟಿರುವ ಎಸ್‌ಬಿಐ ಗ್ರಾಹಕರಿಗೆ ಲಾಭವನ್ನುಂಟು ಮಾಡಲಿದೆ.
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಬಡ್ಡಿ ದರ ಮತ್ತು ಸಾಲದ ಬಡ್ಡಿ ದರ (ಬಿಪಿಎಲ್ಆರ್) ತಲಾ ಶೇ.0.30 ಅಂಕಗಳಷ್ಟು ಕಡಿತಗೊಳಿಸಿದೆ. ಇದು ಹಳೆಯ ಸಾಲದ ದರ ಅನ್ವಯಿಸುವ ಸುಮಾರು 80 ಲಕ್ಷದಷ್ಟಿರುವ ಎಸ್ಬಿಐ ಗ್ರಾಹಕರಿಗೆ ಲಾಭವನ್ನುಂಟು ಮಾಡಲಿದೆ.
ಮೂಲಬಡ್ಡಿ ದರವನ್ನು ಪ್ರಸ್ತುತ ಇರುವ ಶೇ.8.95ರಿಂದ ಶೇ.8.65ಕ್ಕೆ ಇಳಿಕೆ ಮಾಡಲಾಗಿದೆ ಮತ್ತು ಬಿಪಿಎಲ್ಆರ್ ಅನ್ನು ಶೇ.13.70ದಿಂದ ಶೇ.13.40ಕ್ಕೆ ಇಳಿಕೆ ಮಾಡ ಲಾಗಿದೆ. ಆದರೆ ಎಂಸಿಎಲ್ ಆರ್ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಂಸಿಎಲ್ಆರ್ ಶೇ. 7.95ರಷ್ಟು ಮುಂದುವರಿಯಲಿದೆ. ಸೋಮವಾರದಿಂದ ನೂತನ ನೀತಿ ಅನ್ವಯವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
