ಕ್ಯಾಮರಾ ಮುಂದೆ ವರದಿಗಾರ್ತಿ ಅಸಭ್ಯ ಬಟ್ಟೆ ಧರಿಸಿದ ಆರೋಪಸೌದಿ ವರದಿಗಾರ್ತಿ ವಿರುದ್ದ ತನಿಖೆಗೆ ಆದೇಶಸೌದಿಯ ಅಲ್ ಆನ್ ಸುದ್ದಿವಾಹಿನಿಯ ವರದಿಗಾರ್ತಿ ಶಿರಿನ್ಟ್ರೋಲ್ ನಿಂದ ಬೇಸತ್ತು ದೇಶ ತೊರೆದ ಶಿರಿನ್
ರಿಯಾದ್(ಜೂ.28): ಸೌದಿ ಅರೇಬಿಯಾದಲ್ಲಿ ಇತ್ತೀಚಿಗಷ್ಟೇ ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ಕೊಡಲಾಗಿದೆ. ಅಂದರೆ ಸೌದಿಯಲ್ಲಿ ಇನ್ನು ಮುಂದೆ ಮಹಿಳೆಯರು ವಾಹನ ಓಡಿಸಬಹುದು. ಆದರೆ ಈ ಹೊಸ ನಿಯಮ ಓರ್ವ ಮಹಿಳಾ ವರದಿಗಾರ್ತಿ ದೇಶವನ್ನೇ ಬಿಡುವಂತ ಸನ್ನಿವೇಶ ಸೃಷ್ಟಿಸುತ್ತೆ ಅನ್ನೋದು ಮಾತ್ರ ಯಾರಿಗೂ ಗೊತ್ತಿರಲಿಲ್ಲ.
ಹೌದು, ಸೌದಿಯಲ್ಲಿ ಮಹಿಳೆಯರಿಗೆ ವಾಹನ ಚಲಾಯಿಲು ಅನುಮತಿ ನೀಡಲಾಗಿದೆ. ಆದರೆ ಈ ಕುರಿತು ವರದಿ ಮಾಡುತ್ತಿದ್ದ ಶಿರಿನ್ ಅಲ್ ರಿಫಾಯಿ ಎಂಬ ಅಲ್ ಆನ್ ಟಿವಿ ವರದಿಗಾರ್ತಿ, ಕ್ಯಾಮರಾ ಮುಂದೆ ಅಸಭ್ಯ ಬಟ್ಟೆ ಧರಿಸಿ ವರದಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸೌದಿ ಸರ್ಕಾರ ಮಹಿಳೆ ವಿರುದದ ತನಿಖೆಗೆ ಆದೇಶ ಕೂಡ ನೀಡಲಾಗಿದೆ. ಶಿರಿನ್ ಧರಿಸಿದ್ದ ಬಟ್ಟೆ ಸೌದಿ ಸಂಪ್ರದಾಯದ ಪ್ರಕಾರ ಅಸಭ್ಯ ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿರಿನ್ ವಿರುದ್ದ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಶಿರಿನ್ ಧರಿಸಿದ್ದ ಬಟ್ಟೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶಿರಿನ್ ವಿರುದ್ದ ತನಿಖೆಗೆ ಆದೇಶ ನೀಡಲಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುರಿತು ಅಸಭ್ಯ ಪದ ಬಳಸಿ ನಿಂದಿಸುತ್ತಿರುವದರಿಂದ ನೊಂದಿರುವ ಶಿರಿನ್ ಇದೀಗ ದೇಶ ತೊರೆದಿದ್ದಾರೆ. ತಮ್ಮ ವಿರುದ್ದ ಕೀಳು ಆರೋಪ ಮಾಡುತ್ತಿರುವುದರಿಂದ ಮನನೊಂದು ದೇಶ ತೊರೆಯುತ್ತಿರುವುದಾಗಿ ಶಿರಿನ್ ತಿಳಿಸಿದ್ದಾರೆ.
