ಸೌದಿ ಅರೇಬಿಯಾದ ನಿರಂಕುಶ ಪ್ರಭುತ್ವದ ಆಡಳಿತದ ಹೊರತಾಗಿಯೂ, ಮಾನವ ಹಕ್ಕುಗಳಿಗಾಗಿ ಜೈಲು ಸೇರಿದ ಅಬ್ದುಲ್ಲಾ ಅಲ್ ಹಮೀದ್, ಮೊಹಮ್ಮದ್ ಫಹಾದ್ ಅಲ್ ಕ್ವಾತನಿ ಹಾಗೂ ವಾಲೀದ್ ಅಬು ಅಲ್ ಖೈರ್ ಅವರು 2018ನೇ ಸಾಲಿನ ಪರ್ಯಾಯ ನೊಬೆಲ್‌ಗೆ ಭಾಜನರಾಗಿದ್ದಾರೆ. 

ಕೋಪನ್‌ಹೇಗನ್[ಸೆ.25]: ಸೌದಿಯ ಮೂವರು ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಲ್ಯಾಟಿನ್ ಅಮೆರಿಕದ ಇಬ್ಬರು ಭ್ರಷ್ಟಾಚಾರ ನಿಗ್ರಹ ಚಳವಳಿಗಾರರಿಗೆ ಪರ್ಯಾಯ ನೊಬೆಲ್ ಆದ ‘ರೈಟ್ ಲೈವ್‌ಲಿವುಡ್ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ.

ಸೌದಿ ಅರೇಬಿಯಾದ ನಿರಂಕುಶ ಪ್ರಭುತ್ವದ ಆಡಳಿತದ ಹೊರತಾಗಿಯೂ, ಮಾನವ ಹಕ್ಕುಗಳಿಗಾಗಿ ಜೈಲು ಸೇರಿದ ಅಬ್ದುಲ್ಲಾ ಅಲ್ ಹಮೀದ್, ಮೊಹಮ್ಮದ್ ಫಹಾದ್ ಅಲ್ ಕ್ವಾತನಿ ಹಾಗೂ ವಾಲೀದ್ ಅಬು ಅಲ್ ಖೈರ್ ಅವರು 2018ನೇ ಸಾಲಿನ ಪರ್ಯಾಯ ನೊಬೆಲ್‌ಗೆ ಭಾಜನರಾಗಿದ್ದಾರೆ. 

ಈ ಪ್ರಶಸ್ತಿಯ 82,42,479 ರುಪಾಯಿಗಳನ್ನು ಅಬ್ದುಲ್ಲಾ ಅಲ್ ಹಮೀದ್, ಮೊಹಮ್ಮದ್ ಫಹಾದ್ ಅಲ್ ಕ್ವಾತನಿ ಹಾಗೂ ವಾಲೀದ್ ಅಬು ಅಲ್ ಖೈರ್ ಹಂಚಿಕೊಳ್ಳಲಿದ್ದಾರೆ.