ವಾಷಿಂಗ್ಟನ್(ಸೆ.26): ಮಹತ್ವದ ಬೆಳವಣಿಗೆಯೊಂದರಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ನಡೆದಿದ್ದು ತಮ್ಮ ಕಣ್ಗಾವಲಿನಲ್ಲಿ ಎಂದು ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಒಪಪ್ಪಿಕೊಂಡಿದ್ದಾರೆ.

ಅಮೆರಿಕ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಸತ್ಯ ಒಪ್ಪಿಕೊಂಡಿರುವ ಸೌದಿ ದೊರೆ, ಜಮಾಲ್ ಖಶೋಗ್ಗಿ ಹತ್ಯೆಯ ಸಂಪೂರ್ಣ ಹೊಣೆಯನ್ನು ಹೊರುವುದಾಗಿ ಸ್ಪಷ್ಟಪಡಿಸಿದ್ದಾರೆ. 

ಇದೇ ಅಕ್ಟೋಬರ್ 1ರಂದು ಸಂದರ್ಶನದ ಪೂರ್ಣ ಡಾಕ್ಯುಮೆಂಟರಿ ಪ್ರಸಾರವಾಗಲಿದ್ದು, ಇಡೀ ವಿಶ್ವ ಈ ಸಂದರ್ಶನಕ್ಕಾಗಿ ಕಾದು ಕುಳಿತಿದೆ. 

ಜಮಾಲ್ ಹತ್ಯೆಗೆ ಸೌದಿ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅವರೇ ನೇರ ಹೊಣೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನೇರ ಆರೋಪ ಮಾಡಿತ್ತು.

2018ರ ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್’ನಲ್ಲಿರುವ ಸೌದಿ ಅರೇಬಿಯಾ ರಾಯಭಾರಿ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯಾಗಿತ್ತು.