ಓಸಾಕಾ(ಜೂ.29) : ಮಹತ್ವದ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾ ವಾರ್ಷಿಕವಾಗಿ ಹೆಚ್ಚುವರಿ 30 ಸಾವಿರ ಭಾರತೀಯ ಮುಸ್ಲಿಮರು ಮೆಕ್ಕಾ ಮಸೀದಿ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ. 

ಈ ಮೂಲಕ ಮುಸ್ಲಿಂ ಸಮುದಾಯದ ಪವಿತ್ರ ಯಾತ್ರಾ ಸ್ಥಳ ವಾದ ಮೆಕ್ಕಾ ಮಸೀದಿಗೆ 2 ಲಕ್ಷ ಭಾರತೀಯ ಮುಸ್ಲಿಮರು ಭೇಟಿ ನೀಡಬಹುದಾಗಿದೆ. 

ಇದಕ್ಕೂ ಮೊದಲು 1.70 ಲಕ್ಷ ಭಾರತೀಯರು ಮಾತ್ರವೇ ಮೆಕ್ಕಾ ಭೇಟಿ ನೀಡಬಹುದಾಗಿತ್ತು. ಜಪಾನ್‌ನಲ್ಲಿ ನಡೆಯುತ್ತಿರುವ ಜಿ-20 ಶೃಂಗದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಈ ಬಗ್ಗೆ ಸಮಾಲೋಚಿಸಿದ್ದಾರೆ.