ರಿಯಾದ್‌[ಅ.06]: ತೈಲದ ಹೊರತಾಗಿ ಪರ್ಯಾಯ ಆದಾಯ ಗಳಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಪ್ರವಾಸಿ ವೀಸಾ ಪರಿಚಯಿಸಿದ್ದ ಖಟ್ಟರ್‌ ಮುಸ್ಲಿಂ ಸಂಪ್ರದಾಯಸ್ಥ ರಾಷ್ಟ್ರ ಸೌದಿ ಅರೇಬಿಯಾ, ತನ್ನ ಬಿಗಿ ನೀತಿಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡಿದೆ.

ವಿದೇಶಿಗರಿಗೆ ಬುರ್ಖಾ ಕಡ್ಡಾಯ ಕಾನೂನು ಹಿಂಪಡೆದ ಬಳಿಕ, ವಿದೇಶಿ ಅವಿವಾಹಿತ ಜೋಡಿಗಳಿಗೆ ಒಂದೇ ಹೋಟೆಲ್‌ ಕೋಣೆಯಲ್ಲಿ ತಂಗುವ ಅವಕಾಶ ಕಲ್ಪಿಸಿದೆ. ಅಲ್ಲದೇ ಸೌದಿ ಅಥವಾ ವಿದೇಶಿ ಮಹಿಳೆಯರು ಸ್ವತಂತ್ರವಾಗಿ ಹೋಟೆಲ್‌ ಕೋಣೆಗಳನ್ನು ಬುಕ್‌ ಮಾಡಬಹುದು ಎಂದಿದೆ. ಆ ಮೂಲಕ ವಿದೇಶಿ ಪ್ರವಾಸಿಗರ ಆಕರ್ಷಣೆಗೆ ಮುಂದಾಗಿದೆ.

ಸೌದಿಯಲ್ಲಿ ಸಾರ್ವಜನಿಕ ಚುಂಬನ, ಬಿಗಿ ಬಟ್ಟೆ ಧರಿಸಿದ್ರೆ ಬೀಳುತ್ತೆ ದಂಡ!

ಈ ಬಗ್ಗೆ ಸೌದಿ ಪ್ರವಾಸೋದ್ಯಮ ಹಾಗೂ ರಾಷ್ಟ್ರೀಯ ಪಂರಂಪರೆ ಸಚಿವಾಲಯ ಅಧೀಕೃತ ಪ್ರಕಟಣೆ ಹೊರಡಿಸಿದ್ದು, ಸೌದಿ ಹೊರೆತು ಪಡಿಸಿ ಇತರೆ ದೇಶದ ಜೋಡಿಗಳು ಅಧಿಕೃತ ಸಂಬಂಧ ದಾಖಲೆ ಇಲ್ಲದೇ ಒಂದೇ ಕೋಣೆಯಲ್ಲಿ ತಂಗಬಹುದು. ಆದರೆ ಮದ್ಯದ ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದೆ.

ಈ ಹಿಂದೆ ಅಧಿಕೃತ ದಾಖಲೆ ಸಲ್ಲಿಸಿದ ಬಳಿಕವೇ ಗಂಡ ಹೆಂಡತಿಗೆ ಮಾತ್ರ ಒಂದೇ ರೂಮ್‌ನಲ್ಲಿ ತಂಗುವ ಅವಕಾಶ ಇತ್ತು. ಸೌದಿಯಲ್ಲಿ ವಿವಾಹಪೂರ್ವ ಲೈಂಗಿಕತೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದರಿಂದ ಅವಿವಾಹಿತ ಜೋಡಿಗಳಿಗೆ ಒಂದೇ ಕೋಣೆಯಲ್ಲಿ ತಂಗುವ ಅವಕಾಶ ಇರಲಿಲ್ಲ.

ಪತ್ರಕರ್ತ ಜಮಾಲ್ ಸತ್ತಿದ್ದು ನನ್ನ ಕಣ್ಗಾವಲಿನಲ್ಲಿ: ಸೌದಿ ದೊರೆ!