ಎರಡು ವರ್ಷದ ಬಳಿಕ ಸೂಕ್ತ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಪ್ರತಿ ಸರ್ಕಾರದಲ್ಲೂ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಕಾಡಿ-ಬೇಡಿ ಸ್ಥಾನಮಾನ ಪಡೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಎರಡು ವರ್ಷದ ಬಳಿಕ ಸೂಕ್ತ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ. ಪ್ರತಿ ಸರ್ಕಾರದಲ್ಲೂ ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಕಾಡಿ-ಬೇಡಿ ಸ್ಥಾನಮಾನ ಪಡೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನವರು ಸದ್ಯಕ್ಕೆ 4 ಸಚಿವ ಸ್ಥಾನ ಭರ್ತಿ ಮಾಡುತ್ತೇವೆ ಎಂದಿದ್ದಾರೆ. 2 ವರ್ಷದ ಬಳಿಕ ನಮಗೆ ಸೂಕ್ತ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು. ಸಚಿವ ಸ್ಥಾನ ವಂಚಿತರು ಯಾರ ವಿರುದ್ಧವೂ ಹೋರಾಟ ಮಾಡಿಲ್ಲ. 

ಇದು ಅತೃಪ್ತ ಶಾಸಕರ ಅಸಮಾಧಾನ ಮಾತ್ರ ಎಂದ ಅವರು, ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ತಮಗೆ ಅಸಮಾಧಾನ ಇಲ್ಲ. ಸಚಿವ ಸಂಪುಟ ರಚನೆ ಬೆಳವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೂ ಇಲ್ಲ ಎಂದು ಸಮರ್ಥಿಸಿಕೊಂಡರು. 

ಎಚ್‌ಡಿಕೆ ಪರ ಬ್ಯಾಟಿಂಗ್! ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹೊಸ ಬಜೆಟ್ ಮಂಡನೆ ಮಾಡುವುದನ್ನು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಮರ್ಥಿಸಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಬಜೆಟ್ ಅಗತ್ಯವಿಲ್ಲ. ಪೂರಕ ಅಂದಾಜು ಮಂಡನೆ ಮಾಡಿದರೆ ಸಾಕು ಎಂದು ಹೇಳಿದ್ದರು.