ನಾವಂತೂ ಸರ್ಕಾರ ಬೀಳ್ಸಲ್ಲ, ಅದೇ ಬಿದ್ದರೆ ಗೊತ್ತಿಲ್ಲ! ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆ! ರಮೇಶ್, ಡಿಕೆಶಿ ವೈಮನಸ್ಸು ನಂಗೊತ್ತಿಲ್ಲ! ರಮೇಶ್ ಎಸ್ಕಾರ್ಟ್ ಬಿಟ್ಟು ಎಲ್ಲೋಗ್ತಾರೆ ಅನ್ನೋದೂ ಗೊತ್ತಿಲ್ಲ
ಬೆಳಗಾವಿ(ಸೆ.16): ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಮತ್ತೊಂದು ಹೊಸ ಬಾಂಬ್ ಹಾಕಿದ್ದು, ಸರ್ಕಾರ ಪತನವಾದರೂ ನಾವು ಕಾಂಗ್ರೆಸ್ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸರ್ಕಾರ ಪತನವಾದರೂ ಆಗಬಹುದು ಎಂಬ ಸೂಚನೆ ನೀಡಿದ್ದಾರೆ.
ಸಹೋದರ ರಮೇಶ್ ಜಾರಕಿಹೊಳಿ ಮತ್ತು ಸಚಿವ ಡಿಕೆಶಿ ನಡುವಿನ ವೈಮನಸ್ಸು ಕುರಿತು ಪ್ರಶ್ನಿಸಿದಾಗ, ಅವರಿಒಬ್ಬರೂ ಕಳೆದ ೨೦ ವರ್ಷಗಳಿಂದ ಒಂದೇ ಗರಡಿ ಮನೆಯಲ್ಲಿ ಕುಸ್ತಿ ಆಡಿದವರು ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಬೆಳಗಾವಿಗೆ ಬೇರೆ ನಾಯಕರು ಎಂಟ್ರಿಯಾಗಬಾರದು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದರಂತೆ ನಮ್ಮ ಬೇಡಿಕೆ ಈಡೇರಿದ್ದು, ಯಾವುದೇ ಕಾರಣಕ್ಕೂ ಜಾರಕಿಗೊಳಿ ಸಹೋದರರು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಿಲ್ಲ ಎಂದು ಭರವಸೆ ನೀಡಿದರು.
ಇದೇ ವೇಳೆ ಎಸ್ಕಾರ್ಟ್ ಬಿಟ್ಟು ರಹಸ್ಯ ಸ್ಥಳಗಳಿಗೆ ತೆರಳುತ್ತಿರುವ ರಮೇಶ್ ಜಾರಕಿಹೊಳಿ ಕುರಿತು ಪ್ರಶ್ನಿಸಿದಾಗ ಈ ಕುರಿತು ಅವರಿಗೇ ಕೇಳುವುದು ಒಳಿತು ಎಂದು ಸತೀಶ್ ಹೇಳಿದರು. ಕಾಂಗ್ರೆಸ್ ನಿಂದ ಈ ಹಿಂದೆಯೂ ಹಲವು ಶಾಸಕರು ಬಿಜೆಪಿಗೆ ಹೋಗಿದ್ದು, ಈ ಬಾರಿಯೂ ಹೋದರೆ ಅಚ್ಚರಿಪಟಡಬೇಕಿಲ್ಲ ಎಂದು ಸತೀಶ್ ಹೇಳಿದ್ದಾರೆ.
