ಗ್ರಾಮಸ್ಥರು ಮತ್ತು ರಮ್ಯಾ ನಡುವೆ ಕೆಲ ಕಾಲ ಮಾತಿನ ವಾಗ್ವಾದ ಕೂಡ ನಡೆದಿದೆ. ಈ ವೇಳೆ ರಮ್ಯಾ ತಾನು ಮುಖ್ಯಮಂತ್ರಿಗಳ ಮುಂದೆ ಕುಳಿತು ನೀರು ಬಿಡಿಸಲು ಮಾಡಿದ ಶ್ರಮವನ್ನು ಹೇಳಿ ತಾನು ಕಾವೇರಿ ಚಳುವಳಿ ಬರಲಾಗದಿದ್ದನ್ನು ಸಮರ್ಥಿಸಿಕೊಂಡರು.

ಮಂಡ್ಯ(ನ.29): ಮಾಜಿ ಸಂಸದೆ ರಮ್ಯಾಗೆ ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರಮ್ಯಾ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಇಂದು ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ಸಾಗುವ ವೇಳೆ ರಮ್ಯಳನ್ನು ತಡೆದು ಗ್ರಾಮಸ್ಥರು ಕಾವೇರಿ ಚಳುವಳಿಯಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಗ್ರಾಮಸ್ಥರು ಮತ್ತು ರಮ್ಯಾ ನಡುವೆ ಕೆಲ ಕಾಲ ಮಾತಿನ ವಾಗ್ವಾದ ಕೂಡ ನಡೆದಿದೆ. ಈ ವೇಳೆ ರಮ್ಯಾ ತಾನು ಮುಖ್ಯಮಂತ್ರಿಗಳ ಮುಂದೆ ಕುಳಿತು ನೀರು ಬಿಡಿಸಲು ಮಾಡಿದ ಶ್ರಮವನ್ನು ಹೇಳಿ ತಾನು ಕಾವೇರಿ ಚಳುವಳಿ ಬರಲಾಗದಿದ್ದನ್ನು ಸಮರ್ಥಿಸಿಕೊಂಡರು.