ಭಾಷಾ ದ್ವೇಷ ಮತ್ತು ನೀರಿನ ವಿಚಾರಗಳಲ್ಲಿ ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿರುವುದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಶಶಿಕಲಾ ನಟರಾಜನ್ಗೆ ಸೇಫ್ ಅಲ್ವಂತೆ!
ಬೆಂಗಳೂರು (ಫೆ.19): ಪರಪ್ಪನ ಅಗ್ರಹಾರದಲ್ಲಿ ಭದ್ರತೆ ನೆಪವೊಡ್ಡಿ ತಮಿಳುನಾಡು ಜೈಲಿಗೆ ಹೋಗಲು ಶಶಿಕಲಾ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈ ಜೈಲಿನಲ್ಲಿ ವಿರಾಜಮಾನವಾಗಿ ಕುಳಿತು ಶಶಿಕಲಾಗೆ ಹಿಂಬಾಗಿಲಿನಿಂದ ರಾಜ್ಯ ಆಳಲು ಸುಲಭವಾಗುವಂತೆ ಬೆಂಗಳೂರಿನಿಂದ ಚೆನ್ನೈ ಜೈಲಿಗೆ ವರ್ಗಾವಣೆ ಮಾಡಿ ಎಂದು ಕೋರ್ಟ್'ಗೆ ಮನವಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಭಾಷಾ ದ್ವೇಷ ಮತ್ತು ನೀರಿನ ವಿಚಾರಗಳಲ್ಲಿ ಎರಡೂ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯವಿರುವುದರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಶಶಿಕಲಾ ನಟರಾಜನ್ಗೆ ಸೇಫ್ ಅಲ್ವಂತೆ!
ಹೀಗಾಗಿ ಚೆನ್ನೈ ಜೈಲಿಗೆ ಹೋಗಲು ನಾಳೆ ಕೋರ್ಟ್'ಗೆ ಶಶಿಕಲಾ ನಾಳೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.