ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ವಾಪಸ್

Sasikala Return to Parappana Agrahara
Highlights

ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನತ್ತ ಶಶಿಕಲಾ  ಮುಖ ಮಾಡಿದ್ದಾರೆ.  ಪತಿ ನಟರಾಜನ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೇ ತಿಂಗಳ 20 ರಂದು 15 ದಿನಗಳ ತುರ್ತು ಪೆರೋಲ್ ಮೇಲೆ ಶಶಿಕಲಾ ತೆರಳಿದ್ದರು.  

ಆನೇಕಲ್ (ಮಾ. 31): ಪೆರೋಲ್ ಅವಧಿ ಮುಗಿಯುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನತ್ತ ಶಶಿಕಲಾ  ಮುಖ ಮಾಡಿದ್ದಾರೆ.  ಪತಿ ನಟರಾಜನ್ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದೇ ತಿಂಗಳ 20 ರಂದು 15 ದಿನಗಳ ತುರ್ತು ಪೆರೋಲ್ ಮೇಲೆ ಶಶಿಕಲಾ ತೆರಳಿದ್ದರು.  

ಏಪ್ರಿಲ್‌ 3 ರ ವರೆಗೂ  ಶಶಿಕಲಾಗೆ ಪೆರೋಲ್ ಇದ್ದರೂ  ಇಂದು ಪರಪ್ಪನ ಅಗ್ರಹಾರ ಜೈಲಿಗೆ  ಚಿನ್ನಮ್ಮ ವಾಪಸ್ಸಾಗಲಿದ್ದಾರೆ.  ಪತಿ‌ ನಟರಾಜನ್ ಸಾವನ್ನಪ್ಪಿರುವುದರಿಂದ ಆಸ್ತಿ ಹಂಚಿಕೆ ಮಾಡುವಂತೆ ಸಂಬಂಧಿಕರು  ಒತ್ತಡ ಹೇರುತ್ತಿರುವುದರಿಂದ ಬೇಗನೆ ಜೈಲಿಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ.  

ಆಸ್ತಿ ಹಂಚಿಕೆ ವಿಚಾರದಲ್ಲಿ ಸಂಬಂಧಿಕರ ಒತ್ತಡ ಇರುವುದರಿಂದ ಮನೆಗಿಂತ ಜೈಲಿನಲ್ಲಿರುವುದೇ  ವಾಸಿ ಎಂದು ಪರಪ್ಪನ ಅಗ್ರಹಾರ ಜೈಲಿಗೆ ಇಂದೇ ವಾಪಸ್ಸಾಗುತ್ತಿದ್ದಾರೆ  ಶಶಿಕಲಾ.  ಇಂದು ಮುಂಜಾನೆ 8:50 ಚೆನ್ನೈ ನ ತಮ್ಮ ನಿವಾಸದಿಂದ ನೂರಾರು  ಬೆಂಬಲಿಗರೊಂದಿಗೆ ವಾಪಸ್  ಬರುತ್ತಿದ್ದಾರೆ.  ಇಂದು  ಸಂಜೆ 4 ಗಂಟೆ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲು ತಲುಪುವ ಸಾದ್ಯತೆ ಇದೆ. 
 

loader