ಚೆನ್ನೈ(ಡಿ.16): `ಅಣ್ಣಾ ಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್ ಅವರನ್ನ ನಾಮನಿರ್ದೇಶನ ಮಾಡಿದ್ದು ದೊಡ್ಡ ತಪ್ಪು, ಶಶಿಕಲಾ ಅವರೇ ನನ್ನ ಮುಂದಿನ ಉತ್ತರಾಧಿಕಾರಿ ಎಂದು ಜಯಲಲಿತಾ ಎಲ್ಲಿಯೂ ಹೇಳಿರಲಿಲ್ಲ. ಶಶಿಕಲಾರನ್ನ ಕೊನೆಯ ಪಕ್ಷ ಎಂಎಲ್`ಎ ಅಥವಾ ಎಂಎಲ್`ಸಿಯಾಗಿ ಮಾಡಿರಲಿಲ್ಲ.ಇದರರ್ಥ ಶಶಿಕಲಾ ರಾಜಕೀಯಕ್ಕೆ ಅರ್ಹರಲ್ಲ ಎಂಬುದಾಗಿದೆ'  ಎಂದು ಅಣ್ಣಾಡಿಎಂಕೆಯ ಉಚ್ಛಾಟಿತ ಸದಸ್ಯೆ ಶಶಿಕಲಾ ಪುಷ್ಪಾ ಹೇಳಿದ್ದಾರೆ.

`ಶಶಿಕಲಾ ನಟರಾಜನ್ ವರು ಈ ಹಿಂದೆ ಜಯಲಲಿತಾ ವಿರುದ್ಧವೇ ಕೊಲೆಯ ಸಂಚು ಮಾಡಿದ್ದರು. ಹೀಗಾಗಿ, ಅವರನ್ನ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅಮ್ಮನ ಹತ್ಯೆಗೆ ಸಂಚು ರೂಒಇಸಿದವಳನ್ನೇ ಉತ್ತರಾಧಿಕಾರಿಯಾಗಿ ಮಾಡುವುದು ಎಷ್ಟು ಸರಿ' ಎಂದು ಶಶಿಕಲಾ ಪುಷ್ಪ ಪ್ರಶ್ನಿಸಿದ್ದಾರೆ.