ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಎದ್ದಿದೆ. ದಿವಂಗತ ಜಯಲಲಿತಾ ಅವರ ಪರಮಾಪ್ತೆಯಾಗಿದ್ದ ಶಶಿಕಲಾ ನಟರಾಜನ್, ಮುಖ್ಯಮಂತ್ರಿಯಾಗುವ ಮುಹೂರ್ತ ಕೂಡಿ ಬಂದಿದೆ.
ಚೆನ್ನೈ(ಫೆ.04): ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಬಿರುಗಾಳಿ ಎದ್ದಿದೆ. ದಿವಂಗತ ಜಯಲಲಿತಾ ಅವರ ಪರಮಾಪ್ತೆಯಾಗಿದ್ದ ಶಶಿಕಲಾ ನಟರಾಜನ್, ಮುಖ್ಯಮಂತ್ರಿಯಾಗುವ ಮುಹೂರ್ತ ಕೂಡಿ ಬಂದಿದೆ.
ಫೆಬ್ರವರಿ 8 ಅಥವಾ 9ರಂದು ಶಶಿಕಲಾ ಸಿಎಂ ಆಗುವ ಸಾಧ್ಯತೆಗಳಿವೆ. ಈಗಾಗಲೇ ಅಣ್ಣಾಡಿಎಂಕೆಯಿಂದ ಪನ್ನೀರ್ಸೆಲ್ವಂಗೆ ರಾಜೀನಾಮೆ ನೀಡುವಂತೆ ಸೂಚನೆ ಹೋಗಿದೆ. ಅಷ್ಟೇ ಅಲ್ಲ, ಜಯಲಲಿತಾ ಆಪ್ತರಾಗಿದ್ದ ಶೀಲಾ ಬಾಲಕೃಷ್ಣನ್, ವೆಂಕಟರಾಮನ್ ಅವರಿಗೂ ರಾಜೀನಾಮೆ ನೀಡಲು ಸೂಚನೆ ಕೊಡಲಾಗಿದೆ. ಎಲ್ಲರೂ ರಾಜೀನಾಮೆ ನೀಡಿದ ನಂತರ, ಶಶಿಕಲಾ, ಸಿಎಂ ಆಗುವ ಸಾಧ್ಯತೆಗಳಿವೆ.
ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಶಶಿಕಲಾ ನಟರಾಜನ್, ಮುಂದಿನ ಬುಧವಾರ ಅಥವಾ ಗುರುವಾರ ಸಿಎಂ ಆಗಬಹುದು. ಪ್ರಮಾಣ ವಚನವನ್ನೂ ಸ್ವೀಕರಿಸಬಹುದು. ತಮಿಳುನಾಡಿನ ಹಲವು ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿವೆ. ಅಣ್ಣಾಡಿಎಂಕೆಯಾಗಲೀ, ಸಿಎಂ ಅಥವಾ ಸರ್ಕಾರದ ಯಾರೊಬ್ಬರೂ ಇದನ್ನು ಅಲ್ಲಗಳೆದಿಲ್ಲ. ಪ್ರತಿಕ್ರಿಯೆಯನ್ನೂ ನೀಡಿಲ್ಲ. ಹೀಗಾಗಿ ಈ ಸುದ್ದಿ, ನಿಜವಾಗಬಹುದು ಎಂಬ ನಿರೀಕ್ಷೆ ಎಲ್ಲ ಕಡೆ ಇದೆ.
