ದೃಢ ನಿರ್ಧಾರಗಳನ್ನು ಕೈಗೊಳ್ಳುವ ಇಚ್ಛಾಶಕ್ತಿ ಕೂಡ ಆಕೆಗಿಲ್ಲ. ಪಕ್ಷದ ನೇತೃತ್ವ ವಹಿಸಿಕೊಳ್ಳುವುದರಿಂದ ಜಯಲಲಿತಾ ಅವರಿಗೆ ಅಪಮಾನ ಮಾಡಿದಂತಾಗುತ್ತದೆ

ಚೆನ್ನೈ(ಡಿ.12): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದ ನಂತರ ಇತ್ತೀಚಿಗೆ ಎಐಎಡಿಎಂಕೆ ಪಕ್ಷದಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಜಯಾ ಆಪ್ತೆ ಶಶಿಕಲಾ ನಟರಾಜನ್ ಅವರ ಬಗ್ಗೆ ಅಮ್ಮನ ಸೋದರನ ಪುತ್ತಿಯಾದ ದೀಪಾ ಜಯಕುಮಾರ್ ತಮ್ಮ ಅಭಿಪ್ರಾಯಗಳನ್ನು ಸುದ್ದಿವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.

'ಎಐಎಡಿಎಂಕೆ ಪಕ್ಷವನ್ನು ಮುನ್ನಡೆಸುವಂತ ಮಹಿಳೆ ಅವರಲ್ಲ. ಸುಪ್ರೀಂ ಕೋರ್ಟ್'ನಲ್ಲೂ ಆಕೆಯ ವಿರುದ್ಧ ಹಲವು ಅಕ್ರಮ ಆಸ್ತಿ ಗಳಿಕೆ, ಭ್ರಷ್ಟಾಚಾರ ಪ್ರಕರಣಗಳಿವೆ. ದೃಢ ನಿರ್ಧಾರಗಳನ್ನು ಕೈಗೊಳ್ಳುವ ಇಚ್ಛಾಶಕ್ತಿ ಕೂಡ ಆಕೆಗಿಲ್ಲ. ಪಕ್ಷದ ನೇತೃತ್ವ ವಹಿಸಿಕೊಳ್ಳುವುದರಿಂದ ಜಯಲಲಿತಾ ಅವರಿಗೆ ಅಪಮಾನ ಮಾಡಿದಂತಾಗುತ್ತದೆ ಜೊತೆಗೆ ಆಕೆಯ ಹೆಸರಿಗೆ ಕಪ್ಪು ಚುಕ್ಕೆ ಇಟ್ಟಂತಾಗುತ್ತದೆ.

ಜಯಾ ಅವರ ಪರಂಪರೆಯನ್ನು ಮರಳಿ ತರಿಸುವುದು ಆಕೆಯಿಂದ ಸಾಧ್ಯವೇ ಇಲ್ಲ'.ಶಶಿಕಲಾ ಅವರನ್ನು ಹೊರತುಪಡಿಸಿ ಉಳಿದವರನ್ನು ನಾಯಕತ್ವದ ಮುಂಚೂಣಿಗೆ ತಂದರೆ ಪಕ್ಷದ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ಮುಖಂಡರು ಇಷ್ಟಪಟ್ಟರೆ ತಾವು ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಎಂದು ಪತ್ರಕರ್ತರು ಆಗಿರುವ ದೀಪಾ ಜಯಕುಮಾರ್ ತಿಳಿಸಿದ್ದಾರೆ.