ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪತಿ ನಟರಾಜನ್ ಕಳೆದ ರಾತ್ರಿ ವಿಧಿ ವಶರಾಗಿದ್ದಾರೆ.
ಚೆನ್ನೈ: ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಪತಿ ನಟರಾಜನ್ ಕಳೆದ ರಾತ್ರಿ ವಿಧಿ ವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಟರಾಜನ್ ಚೆನ್ನೈನ ಗ್ಲೋಬಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ನಟರಾಜನ್ ಅವರಿಗೆ 76 ವರ್ಷ ವಯಸ್ಸಾಗಿತ್ತು.
ಬಹು ಅಂಗಾಂಗ ವೈಫಲ್ಯ, ಶ್ವಾಸಕೋಶ ಸೋಂಕು ಹಿನ್ನೆಲೆ ಮಾ.16ರಂದು ಚೆನ್ನೈನ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಿಕಲಾ ಪತಿ ಚಿಕಿತ್ಸೆ ಫಲಿಸದೇ ತಡರಾತ್ರಿ 1.30ರ ಸುಮಾರಿಗೆ ವಿಧಿವಶರಾಗಿದ್ದಾರೆ.
ಶ್ರೀರಾಮಚಂದ್ರ ಮೆಡಿಕಲ್ ಆಸ್ಪತ್ರೆಯಲ್ಲಿ ದೇಹ ಸಂರಕ್ಷಣೆಗೆ ಇಡಲಾಗಿದೆ. ಇನ್ನು ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾಗೆ ಪೆರೋಲ್ ಸಿಕ್ಕ ಬಳಿಕ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ.ಶಶಿಕಲಾ ಅವರು ಇನ್ನಷ್ಟೇ ತಮಿಳುನಾಡಿಗೆ ತೆರಳಬೇಕಿದೆ.

Last Updated 11, Apr 2018, 12:42 PM IST