ಎಐಎಡಿಎಂಕೆ ನಾಯಕಿ ಶಶಿಕಲಾಗೆ ವಿಶೇಷ ವ್ಯವಸ್ಥೆ ಒದಗಿಸಿಕೊಟ್ಟ ಆರೋಪ ಎದುರಿಸುತ್ತಿರುವ ಪರಪ್ಪನ  ಅಗ್ರಹಾರದ ಮಹಾ ನಿರ್ದೇಶಕ ಎಚ್.ಎನ್ ಸತ್ಯನಾರಾಯಣ್ ರಾವ್’ರವರನ್ನು ಕಡ್ಡಾಯ ರಜೆಯ ಮೇರೆಗೆ ಕಳುಹಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು (ಜು.14): ಎಐಎಡಿಎಂಕೆ ನಾಯಕಿ ಶಶಿಕಲಾಗೆ ವಿಶೇಷ ವ್ಯವಸ್ಥೆ ಒದಗಿಸಿಕೊಟ್ಟ ಆರೋಪ ಎದುರಿಸುತ್ತಿರುವ ಪರಪ್ಪನ ಅಗ್ರಹಾರದ ಮಹಾ ನಿರ್ದೇಶಕ ಎಚ್.ಎನ್ ಸತ್ಯನಾರಾಯಣ್ ರಾವ್’ರವರನ್ನು ಕಡ್ಡಾಯ ರಜೆಯ ಮೇರೆಗೆ ಕಳುಹಿಸಲು ಸರ್ಕಾರ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಸ್ಟೀಲ್ ಬ್ರಿಡ್ಜ್ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಜುಗರವನ್ನು ಅನುಭವಿಸಿದೆ. ಇನ್ನು 6 ತಿಂಗಳಲ್ಲಿ ಚುನಾವಣೆ ಇರುವುದರಿಂದ ಭಾರೀ ಮುಜುಗರದಿಂದ ತಪ್ಪಿಸಿಕೊಳ್ಳಲು ಸತ್ಯನಾರಾಯಣ್ ರಾವ್’ರವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಚಿಂತನೆ ನಡೆಸಿದೆ.

ಸತ್ಯನಾರಾಯಣ್ ರಾವ್’ರವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲು ಸರಕಾರ ಅವಲೋಕನ ನಡೆಸುತ್ತಿದ್ದು, ಈ ತಿಂಗಳ ಕೊನೆಯಲ್ಲಿ ಅವರ ಸೇವೆ ಕೊನೆಗೊಳ್ಳಲಿದೆ. ಒಂದು ವೇಳೆ ಅಧಿಕಾರಿಯು ನಿವೃತ್ತಿ ವಯಸ್ಸಿಗೆ ಬಂದಿದ್ದರೆ ಇಲಾಖಾ ತನಿಖೆಯನ್ನು ತಪ್ಪಿಸಿಕೊಳ್ಳಬಹುದು. ಅವರ ನಿವೃತ್ತಿ ನಂತರದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಅಮಾನತುಗೊಂಡ ಅವಧಿಯಲ್ಲಿ ನಿವೃತ್ತರಾದರೆ ಅವರು ತನಿಖೆಯನ್ನು ಎದುರಿಸಬೇಕಾಗಬಹುದು. ಅವರ ನಿವೃತ್ತಿಯ ನಂತರದ ಬೆನಿಫಿಟ್’ಗಳನ್ನು ತಡೆ ಹಿಡಿಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸತ್ಯನಾರಾಯಣ್ ರಾವ್’ರವರನ್ನು ಸಂಪರ್ಕಿಸಲು ಮಾಧ್ಯಮಗಳು ಪ್ರಯತ್ನಿಸಿದ್ದು, ಅವರು ಪ್ರತಿಕ್ರಿಯಿಸಲು ನಿರಾಕರಿಸಿಸದ್ದಾರೆ.