ಮೈಸೂರು(ಅ.20): ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳು ಬ್ರಹ್ಮಣಿಯ ಮದುವೆ ಭಾರೀ ವಿವಾದಕ್ಕೆ ಒಳಗಾಗಿದೆ. ಆಮಂತ್ರಣ ಪತ್ರಿಕೆಯಿಂದಲೇ ಅದ್ದೂರಿತನ ತೋರಿದ್ದ ಗಣಿಧಣಿ ವೈಭೋಗಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಜನಾರ್ದನ ರೆಡ್ಡಿ ತಮ್ಮ ಪುತ್ರಿಯ ಮದುವೆಯನ್ನ ಅದ್ಧೂರಿಯಾಗಿ ಮಾಡುತ್ತಿರುವ ಬಗ್ಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಂತೋಷ್ ಹೆಗ್ಡೆ, `ಕೊಳ್ಳೆ ಹೊಡೆದ ಹಣವೂ ಸಹಾಯಕ್ಕೆ ಬರುತ್ತೆ ಎನ್ನುವ ಸಂದೇಶವನ್ನ ರೆಡ್ಡಿ ಸಮಾಜಕ್ಕೆ ರವಾನಿಸಿದ್ದಾರೆ' ಎಂದು ಟೀಕಿಸಿದ್ದಾರೆ.