ನವದೆಹಲಿ[ಅ.05]: ಪಕ್ಷದಲ್ಲಿ ರಾಹುಲ್‌ ಬೆಂಬಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಮುಂಬೈ ಮಹಾನಗರ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಸಂಜಯ್‌ ನಿರುಪಮ್‌ ಗಂಭೀರ ಆರೋಪ ಮಾಡಿರುವುದು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಜೊತೆಗೆ ಪಕ್ಷದಲ್ಲಿ ಇದೀಗ ಸೋನಿಯಾ ವರ್ಸಸ್‌ ರಾಹುಲ್‌ ಜಟಾಪಟಿ ಶುರುವಾಗಿದೆ ಎಂಬ ಆಘಾತಕಾರಿ ವರದಿಗಳೂ ಹೊರಬಿದ್ದಿವೆ. ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಪಕ್ಷದಲ್ಲಿ ನಡೆದ ಬೆಳವಣಿಗೆಗಳು ಇಂಥ ಅನುಮಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಅನುಮಾನಕ್ಕೆ ಕಾರಣವಾದ ಅಂಶಗಳು?

ರಾಹುಲ್‌ ಆಪ್ತರು

1. ಸೋನಿಯಾ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಸಭೆಗೆ ರಾಹುಲ್‌ ಗೈರಾಗುತ್ತಿದ್ದಾರೆ.

2. ಮುಂಬೈ ಕಾಂಗ್ರೆಸ್‌ ರಾಹುಲ್‌ ಆಪ್ತ ನಿರುಪಮ್‌, ದೇವೋರಾಗೆ ಮನ್ನಣೆ ಇಲ್ಲ

3. ಹರ್ಯಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹುದ್ದೆಯಿಂದ ಅಶೋಕ್‌ ತನ್ವರ್‌ ಔಟ್‌

4. ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾಗೆ ಯಾವುದೇ ಸ್ಥಾನಮಾನ ನೀಡಿಲ್ಲ

5. ರಾಹುಲ್‌ ಆಪ್ತೆ ರಮ್ಯಾಗೆ ಸಾಮಾಜಿಕ ಜಾಲತಾಣ ಮುಖ್ಯಸ್ಥ ಹುದ್ದೆಯಿಂದ ಕೊಕ್‌

ಸೋನಿಯಾ ಆಪ್ತರು

1. ಸೋನಿಯಾ ಅಧ್ಯಕ್ಷರಾದ ಬಳಿಕ ಹಿರಿ ತಲೆಗಳಿಗೆ ಪಕ್ಷದಲ್ಲಿ ಹೆಚ್ಚು ಮನ್ನಣೆ

2. ಮುಂಬೈ ಕಾಂಗ್ರೆಸ್‌ ಅಧ್ಯಕ್ಷ ಗಾದಿಗೆ ಹಿರಿಯ ಏಕ್‌ನಾಥ್‌ ಗಾಯಕ್‌ವಾಡ್‌ ನೇಮಕ

3. ಹರ್ಯಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಹುದ್ದೆಗೆ ಸೋನಿಯಾ ಆಪ್ತ ಹೂಡಾ ನೇಮಕ

4. ಮಧ್ಯಪ್ರದೇಶದಲ್ಲಿ ಸೋನಿಯಾ ಆಪ್ತ ಕಮಲ್‌ಗೆ ಮಣೆ, ಸಿಂಧಿಯಾ ಮೂಲೆಗುಂಪು